ಮತ್ತೆ ಒಂದಾದ ತೆಂಡುಲ್ಕರ್-ಕಾಂಬ್ಳಿ

Update: 2017-10-25 09:43 GMT

ಮುಂಬೈ, ಅ.25: ಕ್ರಿಕೆಟ್ ಲೆಜೆಂಡ್  ಸಚಿನ್ ತೆಂಡುಲ್ಕರ್ ಹಾಗೂ ವಿನೋದ್ ಕಾಂಬ್ಳಿ ಮುಂಬೈ ಕ್ರಿಕೆಟ್ ವಲಯದಲ್ಲಿ ಬಾಲ್ಯದಲ್ಲೇ ಹೊಸ ಸಂಚಲನ ಮೂಡಿಸಿದವರು. 1998ರಲ್ಲಿ ಶಾಲಾ ಮಟ್ಟದ ಕ್ರಿಕೆಟ್ ಪಂದ್ಯದಲ್ಲಿ 664 ರನ್ ಜೊತೆಯಾಟ ನಡೆಸುವ ಮೂಲಕ ಸುದ್ದಿಯಾಗಿದ್ದರು.

ಇಬ್ಬರು ಮುಂಬೈ ಸ್ಟಾರ್ ಆಟಗಾರರು ಜೂನಿಯರ್ ಕ್ರಿಕೆಟ್ ತಂಡದಲ್ಲಿ ನೀಡಿರುವ ಉತ್ತಮ ಪ್ರದರ್ಶನದ ಮೂಲಕ ಹಿರಿಯರ ತಂಡಕ್ಕೆ ಆಯ್ಕೆಯಾಗಿದ್ದರು. ತೆಂಡುಲ್ಕರ್ ಕ್ರಿಕೆಟ್‌ನಲ್ಲಿ ಭಾರೀ ಯಶಸ್ಸು ಸಾಧಿಸಿದರೆ ಕಾಂಬ್ಳಿ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳಲು ವಿಫಲರಾಗಿದ್ದರು.

ಇದೀಗ ಇಬ್ಬರು ಆಪ್ತಮಿತ್ರರು 8 ವರ್ಷಗಳ ಬಳಿಕ ಮುಂಬೈನಲ್ಲಿ ಇತ್ತೀಚೆಗೆ ನಡೆದ ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್‌ದೇಸಾಯಿ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಒಂದಾಗಿದ್ದಾರೆ. 8 ವರ್ಷಗಳ ಹಿಂದೆ ತೆಂಡುಲ್ಕರ್‌ರನ್ನು ಟೀಕಿಸಿದ್ದ ಕಾಂಬ್ಳಿ, ತಾನು ವೃತ್ತಿಜೀವನದಲ್ಲಿ ಸಂಕಷ್ಟದಲ್ಲಿದ್ದಾಗ ತೆಂಡುಲ್ಕರ್ ನೆರವಿಗೆ ಬಂದಿರಲಿಲ್ಲ ಎಂದು ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ ತೆಂಡುಲ್ಕರ್‌ರ ವಿದಾಯದ ಕ್ರಿಕೆಟ್ ಪಂದ್ಯಕ್ಕೆ ಕಾಂಬ್ಳಿಗೆ ಆಹ್ವಾನ ನೀಡಲಾಗಿರಲಿಲ್ಲ. ಆನಂತರ ತೆಂಡುಲ್ಕರ್‌ರ ಆತ್ಮಚರಿತ್ರೆಯಲ್ಲೂ ಕಾಂಬ್ಳಿಯ ವಿಚಾರ ಪ್ರಸ್ತಾವಿಸಲಾಗಿಲ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News