ಬಡ್ಡಿ ವ್ಯವಹಾರ: ಆರೋಪಿ ಬಂಧನ
ಬೆಂಗಳೂರು, ಅ. 25: ಗಿರವಿ ಅಂಗಡಿ ನೆಪದಲ್ಲಿ ಅನಧಿಕೃತವಾಗಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಆರೋಪದ ಮೇಲೆ ಇಲ್ಲಿನ ಬನಶಂಕರಿ ಠಾಣಾ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬನಶಂಕರಿಯ ನಿವಾಸಿ ಕಮಲ್ (30) ಎಂದು ಗುರುತಿಸಲಾಗಿದೆ.
ಆರೋಪಿ ಇಲ್ಲಿನ ಕದಿರೇನಹಳ್ಳಿಯಲ್ಲಿ ಗಿರವಿ ಅಂಗಡಿ ಇಟ್ಟುಕೊಂಡಿದ್ದು, ವಾಹನಗಳ ಮೂಲ ಆರ್‌ಸಿ ಬುಕ್, ಸ್ಮಾಟ್‌ಕಾರ್ಡ್, ಪರ್ಮಿಟ್ ಇನ್ನಿತರ ದಾಖಲೆಗಳನ್ನು ಪಡೆದು ಬಡ್ಡಿಗೆ ಸಾಲ ನೀಡುತ್ತಿದ್ದ ಎನ್ನಲಾಗಿದೆ.
ಆರೋಪಿಯಿಂದ ಹಲವು ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಬನಶಂಕರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
ಮೂವರ ಸೆರೆ: ಗೃಹ ಬಳಕೆ ಅಡುಗೆ ಅನಿಲವನ್ನು ವಾಣಿಜ್ಯ ಉದ್ದೇಶಕ್ಕೆ ಅನಧಿಕೃತವಾಗಿ ಬಳಕೆ ಮಾಡುತ್ತಿದ್ದ ಆರೋಪ ಮೇಲೆ ಸುನೀಲ್ ಕುಮಾರ್(23), ಶಿವರಾಜು (33) ಹಾಗೂ ಲಕ್ಷ್ಮಣಗೌಡ(35) ಎಂಬವರನ್ನು ಕೆಂಗೇರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 116 ಅನಿಲ ಸಿಲಿಂಡರ್‌ಗಳು ಸೇರಿದಂತೆ ಇನ್ನಿತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಕೆಂಗೇರಿ ಠಾಣಾ ಪೊಲೀಸರು ಮೊದ್ದಮೆ ದಾಖಲು ಮಾಡಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.