×
Ad

ಟಿಪ್ಪು ಅಭಿವೃದ್ಧಿಯ ಹರಿಕಾರ: ಬಿಜೆಪಿ ಮುಖಂಡ ಡಿ.ಬಿ.ಚಂದ್ರೇಗೌಡ

Update: 2017-10-25 20:53 IST

ಬೆಂಗಳೂರು, ಅ. 25: ಟಿಪ್ಪು ಒಳ್ಳೆಯ ಆಡಳಿತಗಾರ, ಮಾತ್ರವಲ್ಲ ಅಭಿವೃದ್ಧಿಯ ಹರಿಕಾರ. ಮೈಸೂರು ಅರಸರಷ್ಟೇ ಪ್ರಭಾವಿಯಾಗಿದ್ದ ಟಿಪ್ಪು. ಆತನ ವಿಚಾರವನ್ನು ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದರಲ್ಲಿ ತಪ್ಪೇನಿಲ್ಲ ಎಂದು ಮಾಜಿ ಸ್ಪೀಕರ್, ಬಿಜೆಪಿ ಮುಖಂಡ ಡಿ.ಬಿ.ಚಂದ್ರೇಗೌಡ ಸಮರ್ಥಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಧಾನಸೌಧ ವಜ್ರ ಮಹೋತ್ಸವ ಹಿನ್ನೆಲೆಯಲ್ಲಿ ಜಂಟಿ ಅಧಿವೇಶನ ಒಂದು ಒಳ್ಳೆಯ ಕಾರ್ಯಕ್ರಮ ಅನ್ನೋ ತೃಪ್ತಿಯಿದೆ. ಬರಬೇಕಾದವರೆಲ್ಲಾ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಜ್ಯದ ಬಗ್ಗೆ ಒಳ್ಳೆಯ ಭಾಷಣ ಮಾಡಿದ್ದಾರೆ. ನಮ್ಮ ರಾಜ್ಯದ ಬಗ್ಗೆ ಕೆಲವು ಒಳ್ಳೆಯ ವಿಚಾರ ಹೇಳಿದ್ದಾರೆ. ಇದು ಕೇವಲ ಸಚಿವಾಲಯದ ಕಾರ್ಯಕ್ರಮ ಅಲ್ಲ. ರಾಜ್ಯ ಸರಕಾರದ ಕಾರ್ಯಕ್ರಮವೂ ಅಲ್ಲ ಎಂಬುದನ್ನು ಗಮನಿಸಬೇಕು ಎಂದು ಮನವಿ ಮಾಡಿದರು.

ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ಟಿಪ್ಪುಸುಲ್ತಾನ್ ಅವರ ಬಗ್ಗೆ ಪ್ರಸ್ತಾಪಿಸಿದ್ದು ತಪ್ಪಲ್ಲ. ಈ ವಿಚಾರದಲ್ಲಿ ವಿವಾದ ಮಾಡಲೇಬೇಕು ಅನ್ನೋರಿಗೆ ಟಿಪ್ಪು ವಿವಾದ ಆಗ್ತಾನೆ. ವಿರೋಧ ಮಾಡುವವರೇ ಈ ಬಗ್ಗೆ ಸಮಜಾಯಿಷಿ ಕೊಡಬೇಕು. ನಮಗೆ ಗೊತ್ತಿರುವ ಇತಿಹಾಸದ ಪ್ರಕಾರ ಟಿಪ್ಪು ಅಭಿವೃದ್ಧಿಯ ಹರಿಕಾರ ಅಂತ ನಮಗೆ ಗೊತ್ತಿದೆ ಎಂದು ಚಂದ್ರೇಗೌಡ ಸಮರ್ಥಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News