ತಾಜ್ ಬಳಿ ಶುಕ್ರವಾರದ ನಮಾಝ್ ನಿಷೇಧಿಸಬೇಕು ಅಥವಾ ಶಿವ ಪ್ರಾರ್ಥನೆಗೂ ಅವಕಾಶ ನೀಡಬೇಕು

Update: 2017-10-27 13:03 GMT

ಹೊಸದಿಲ್ಲಿ, ಅ.27: ತಾಜ್ ಮಹಲ್ ಬಳಿ ಪ್ರತಿ ಶುಕ್ರವಾರ ನಡೆಯುವ ನಮಾಝನ್ನು ನಿಷೇಧಿಸಬೇಕು ಎಂದು ಆರೆಸ್ಸೆಸ್ ನ ಇತಿಹಾಸ ವಿಭಾಗ ಅಖಿಲ ಭಾರತೀಯ ಇತಿಹಾಸ ಸಂಕಲನ್ ಸಮಿತಿ ಆಗ್ರಹಿಸಿದೆ.

“ತಾಜ್ ಮಹಲ್ ರಾಷ್ಟ್ರೀಯ ಪರಂಪರೆಯಾಗಿದೆ. ಧಾರ್ಮಿಕ ಕೇಂದ್ರವಾಗಿ ಬಳಸಲು ಮುಸ್ಲಿಮರಿಗೆ ಏಕೆ ಅನುವು ಮಾಡಿಕೊಡಲಾಗುತ್ತದೆ, ತಾಜ್ ಮಹಲ್ ಬಳಿ ನಮಾಝ್ ಮಾಡಲು ಅವಕಾಶ ನೀಡಿರುವುದನ್ನು ಹಿಂಪಡೆಯಬೇಕು” ಎಂದು ಮಾಧ್ಯಮದೊಂದಿಗೆ ಮಾತನಾಡಿದ ಆರೆಸ್ಸೆಸ್ ಅಂಗಸಂಸ್ಥೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಾ.ಬಾಲಮುಕುಂದ್ ಪಾಂಡೆ ಆಗ್ರಹಿಸಿದ್ದಾರೆ.

ಒಂದು ವೇಳೆ ನಮಾಝ್ ಗೆ ಅವಕಾಶ ನೀಡುವುದಾದರೆ ಶಿವ ಪ್ರಾರ್ಥನೆಗೂ ಅವಕಾಶ ನೀಡಬೇಕು  ಎಂದವರು ಹೇಳಿದ್ದಾರೆ.
ತಾಜ್ ಆವರಣದೊಳಗೆ ಶಿವ ಚಾಲಿಸ್ ಪಠಿಸಿದ್ದ ಹಿಂದೂ ಯುವವಾಹಿನಿಯ ಕಾರ್ಯಕರ್ತರನ್ನು ಭದ್ರತಾ ಸಿಬ್ಬಂದಿ ಹೊರದಬ್ಬಿದ್ದರು. ತಾಜ್ ಮಹಲ್ ಕುರಿತಂತೆ ಉತ್ತರ ಪ್ರದೇಶದ ಶಾಸಕ ಸಂಗೀತ್ ಸೋಮ್ ವಿವಾದಾತ್ಮಕ ಹೇಳಿಕೆ ನೀಡಿದ್ದ ನಂತರ ವಿಶ್ವಪ್ರಸಿದ್ಧ ಸ್ಮಾರಕದ ಬಗ್ಗೆ ಚರ್ಚೆಗಳು ಆರಂಭಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News