×
Ad

ನೌಕರರಿಗೆ ಮಧ್ಯಂತರ ಪರಿಹಾರ ನೀಡುವಂತೆ ಒತ್ತಾಯ

Update: 2017-10-28 20:50 IST

ಬೆಂಗಳೂರು, ಅ.28: ನೌಕರರಿಗೆ ಏಪ್ರಿಲ್‌ನಿಂದಲೇ ಪೂರ್ವಾನ್ವಯವಾಗುವಂತೆ ಶೇ.30 ರಷ್ಟು ಮಧ್ಯಂತರ ಪರಿಹಾರ ನೀಡುವಂತೆ ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟ ಒತ್ತಾಯಿಸಿದೆ.

ಶನಿವಾರ ನಗರದ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಎದುರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟದ ನೂರಾರು ಸದಸ್ಯರು ತಮ್ಮ ವಿವಿಧ ಬೇಡಿಕೆಗಳನ್ನು ಸರಕಾರ ಈಡೇರಿಸಲು ಮುಂದಾಗಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಮಹದೇವಯ್ಯ ಮಠಪತಿ, ವೇತನ ಆಯೋಗವು ವಿವಿಧ ಕಾರಣಗಳನ್ನು ಹೇಳಿಕ ಇನ್ನು ನಾಲ್ಕು ತಿಂಗಳು ಕಾಲಾವಕಾಶ ವಿಸ್ತರಿಸಿರುವುದರಿಂದ ನೌಕರರಿಗೆ ಕಾಲ ಕಾಲಕ್ಕೆ ಸಿಗಬೇಕಾಗಿದ್ದ ವೇತನ ಮತ್ತು ಇತರೆ ಭತ್ತೆಗಳು ವಂಚಿತವಾಗುವಂತಾಗಿದೆ. ಇದರಿಂದಾಗಿ ಕಳೆದ ಏಪ್ರಿಲ್‌ನಿಂದಲೇ ಪೂರ್ವಾನ್ವಯವಾಗುವಂತೆ ಮಧ್ಯಂತರ ಪರಿಹಾರ ನೀಡುವಂತೆ ಒತ್ತಾಯಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರ ನಡುವೆ ಶೇ.65 ರಷ್ಟು ವೇತನ ತಾರತಮ್ಯವಿದೆ. ಇದನ್ನು ಸರಕಾರ ನಿವಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ, ವಿಧಾನಸೌಧ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಕೆ ನೀಡಿದರು.

ಮಧ್ಯಂತರ ಪರಿಹಾರಕ್ಕಾಗಿ ಸರಕಾರಕ್ಕೆ ಮನವಿ ಸಲ್ಲಿಸಿ ಹಲವು ದಿನಗಳು ಕಳೆದರೂ ಇದುವರೆಗೂ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂದೆಯೂ ಇದೇ ರೀತಿ ನಿರ್ಲಕ್ಷ್ಯ ಮನೋಭಾವ ತಾಳಿದರೆ ಹೋರಾಟ ಒಂದೇ ದಾರಿ ಎಂದ ಅವರು, ಕೇಂದ್ರ ಸರಕಾರಿ ನೌಕರರಿಗೆ ಹೋಲಿಸಿದರೆ ಶೇ.67 ರಷ್ಟು ವೇತನ ಕಡಿಮೆ ರಾಜ್ಯ ಸರಕಾರಿ ನೌಕರರಿಗೆ ಬರುತ್ತಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎನ್ನುವ ನೌಕರರ ಬೇಡಿಕೆಯನ್ನು ಸರಕಾರ ಪರಿಗಣಿಸಬೇಕು ಎಂದು ಹೇಳಿದರು.

ಮ್ಯಂತರಪರಿಹಾರಕ್ಕಾಗಿಸರಕಾರಕ್ಕೆಮನವಿಸಲ್ಲಿಸಿಹಲವುದಿನಗಳುಕಳೆದರೂಇದುವರೆಗೂಸರಕಾರಯಾವುದೇಕ್ರಮಕೈಗೊಂಡಿಲ್ಲ.ಮುಂದೆಯೂಇದೇರೀತಿನಿರ್ಲಕ್ಷ್ಯಮನೋಭಾವ ತಾಳಿದರೆ ಹೋರಾಟ ಒಂದೇ ದಾರಿ ಎಂದ ಅವರು, ಕೇಂದ್ರ ಸರಕಾರಿ ನೌಕರರಿಗೆ ಹೋಲಿಸಿದರೆ ಶೇ.67 ರಷ್ಟು ವೇತನ ಕಡಿಮೆ ರಾಜ್ಯ ಸರಕಾರಿ ನೌಕರರಿಗೆ ಬರುತ್ತಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎನ್ನುವ ನೌಕರರ ಬೇಡಿಕೆಯನ್ನು ಸರಕಾರ ಪರಿಗಣಿಸಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಗೌರವಾಧ್ಯಕ್ಷ ಎಸ್.ರೇಣುಕಾರಾಧ್ಯ, ಕಾರ್ಯಾಧ್ಯಕ್ಷ ಡಿ. ಶಿವಶಂಕರ್, ಕೋಶಾಧ್ಯಕ್ಷ ಜಯರಾಮ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News