ಶೋಭಾ ಕರಂದ್ಲಾಜೆ ಹೇಳಿಕೆ 'ನಾನ್‌ಸೆನ್ಸ್': ಸಿಎಂ ಸಿದ್ದರಾಮಯ್ಯ
Update: 2017-10-28 21:05 IST
ಬೆಂಗಳೂರು, ಅ.28: ಇಂಧನ ಇಲಾಖೆಯಲ್ಲಿನ ಅಕ್ರಮಗಳ ಬಗ್ಗೆ ಮಂಪರು ಪರೀಕ್ಷೆಗೆ ಆಗ್ರಹಿಸಿರುವ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಯು 'ನಾನ್‌ಸೆನ್ಸ್' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ನಗರದ ಆನಂದರಾವ್ ವೃತ್ತದ ಬಳಿ ಕೆಪಿಟಿಸಿಎಲ್ ವತಿಯಿಂದ ನಿರ್ಮಾಣವಾಗುತ್ತಿರುವ ಇಂಧನ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಅವರು ಈ ಮೇಲಿನಂತೆ ಉತ್ತರಿಸಿದರು.
"ಶೋಭಾ ಕರಂದ್ಲಾಜೆ ಹೇಳಿರುವ ಮಂಪರು ಪರೀಕ್ಷೆ ಎನ್ನುವುದು ನಾನ್‌ಸೆನ್ಸ್. ಅವರು ತಪ್ಪಿತಸ್ಥರು ಹೀಗಾಗಿ ಏನೇನೋ ಹೇಳುತ್ತಿದ್ದಾರೆ. ಅದಕ್ಕೆಲ್ಲ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಇಂಧನ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಅವರಿಗೆ ಭಯ ಶುರುವಾಗಿದೆ. ಹಾಗಾಗಿ, ಇಂತಹ ಸವಾಲುಗಳನ್ನು ಹಾಕುತ್ತಿದ್ದಾರೆ" ಎಂದು ಸಿದ್ದರಾಮಯ್ಯ ಹೇಳಿದರು.