ನ.9ರಂದು ರಾಷ್ಟ್ರೀಯ ಜಿಎಸ್‌ಟಿ ಕೌನ್ಸಿಲ್ ಸಭೆ: ಸುಶೀಲ್ ಕುಮಾರ ಮೋದಿ
ಬೆಂಗಳೂರು, ಅ.28: ನ.9ರಿಂದ ಎರಡು ದಿನಗಳ ಕಾಲ ರಾಷ್ಟ್ರೀಯ ಜಿಎಸ್‌ಟಿ ಕೌನ್ಸಿಲ್ ಸಭೆ ಗೌಹಾಟಿಯಲ್ಲಿ ನಡೆಯಲಿದ್ದು, ಹಲವು ಪದಾರ್ಥಗಳ ಮೇಲಿನ ತೆರಿಗೆ ಇಳಿಕೆ ಸಂಬಂಧ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ಬಿಹಾರದ ಉಪಮುಖ್ಯಮಂತ್ರಿಯೂ ಆಗಿರುವ ಸರಕು ಮತ್ತು ಸೇವಾ ತೆರಿಗೆ ಮುಖ್ಯಸ್ಥ ಸುಶೀಲ್ ಕುಮಾರ ಮೋದಿ ತಿಳಿಸಿದ್ದಾರೆ.
ಶನಿವಾರ ನಗರದ ಅರಮನೆ ರಸ್ತೆಯ ಖಾಸಗಿ ಹೊಟೇಲ್‌ನಲ್ಲಿ ಜಿಎಸ್‌ಟಿ-ಐಟಿಯ ಮೂರನೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಎಸ್‌ಟಿ ಅನುಷ್ಠಾನಕ್ಕೆ ಎದುರಾಗುತ್ತಿರುವ ತಾಂತ್ರಿಕ ಸವಾಲುಗಳು ಸೇರಿ ಇತರೆ ಸಮಸ್ಯೆಗಳ ಬಗ್ಗೆ ಜಿಎಸ್‌ಟಿ ಮಂಡಳಿ ಸಭೆಯ ಮುಂದಿಡಲಾಗುವುದೆಂದು ಮಾಹಿತಿ ನೀಡಿದರು.
ಜಿಎಸ್‌ಟಿ ಬಂದ ಬಳಿಕ ಜುಲೈ-ಆಗಸ್ಟ್‌ನಲ್ಲಿ 15,060 ಕೋಟಿ ರೂ.ತೆರಿಗೆ ಸಂಗ್ರಹವಾಗಿದ್ದು, ಅದರಲ್ಲಿ 8,698 ಕೋಟಿ ರೂ.ಗಳನ್ನು ಪರಿಹಾರದ ರೂಪದಲ್ಲಿ ಎಲ್ಲ ರಾಜ್ಯಗಳಿಗೆ ನೀಡಲಾಗಿದೆ. ಶೇ.5ರಷ್ಟು ದೊಡ್ಡ ತೆರಿಗೆ ಪಾವತಿದಾರರಿಂದ ಶೇ.95ರಷ್ಟು ತೆರಿಗೆ ಸಂಗ್ರಹವಾಗುತ್ತಿದೆ. ಜಿಎಸ್‌ಟಿ ಬಂದ ಬಳಿಕ ಜುಲೈ-ಆಗಸ್ಟ್‌ನಲ್ಲಿ 15,060 ಕೋಟಿ ರೂ.ತೆರಿಗೆ ಸಂಗ್ರಹವಾಗಿದ್ದು, ಅದರಲ್ಲಿ 8,698 ಕೋಟಿ ರೂ.ಗಳನ್ನು ಪರಿಹಾರದ ರೂಪದಲ್ಲಿ ಎಲ್ಲ ರಾಜ್ಯಗಳಿಗೆ ನೀಡಲಾಗಿದೆ. ಶೇ.5ರಷ್ಟು ದೊಡ್ಡ ತೆರಿಗೆ ಪಾವತಿದಾರರಿಂದ ಶೇ.95ರಷ್ಟು ತೆರಿಗೆ ಸಂಗ್ರಹವಾಗುತ್ತಿದೆ. ದೊಡ್ಡ ದೊಡ್ಡ ತೆರಿಗೆ ಪಾವತಿದಾರರಿಂದ ಯಾವುದೇ ಸಮಸ್ಯೆ ಇಲ್ಲ, ಆದರೆ, ಸಣ್ಣ ತೆರಿಗೆ ಪಾವತಿದಾರರು ಪಾವತಿಸುತ್ತಿಲ್ಲ. ಒಂದೊಂದು ರಾಜ್ಯಗಳಲ್ಲಿ ಒಂದೊಂದು ಬಗೆಯ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿದ್ದು, ಅವುಗಳ ಬಗ್ಗೆ ಗಮನಹರಿಸಲಾಗುತ್ತಿದೆ ಎಂದು ಹೇಳಿದರು.
ಈ ಹಿಂದೆ ನಡೆದ ಸಭೆಗಳಲ್ಲಿ 47 ತಾಂತ್ರಿಕ ಸಮಸ್ಯೆಗಳನ್ನು ಗುರುತಿಸಿ, ಅವುಗಳಲ್ಲಿ 27ಕ್ಕೆ ಅ.31ರೊಳಗೆ ಪರಿಹಾರ ಕಂಡುಹಿಡಿಯುವಂತೆ ಪ್ರತಿಷ್ಠಿತ ಐ.ಟಿ ಸಂಸ್ಥೆ ಇನ್ಫೋಸಿಸ್‌ಗೆ ಹೇಳಲಾಗಿತ್ತು. ಅವುಗಳಲ್ಲಿ 18 ಸಮಸ್ಯೆಗಳನ್ನು ಈಗಾಗಲೇ ಬಗೆಹರಿಸಿ ಶೇ.66.7ರಷ್ಟು ಗುರಿ ಸಾಧನೆ ಮಾಡಿದಂತಾಗಿದೆ ಎಂದರು.
ದೊಡ್ಡ ಸವಾಲು: ಜುಲೈನಲ್ಲಿ 56 ಲಕ್ಷ ಮಂದಿ ವರ್ತಕರು 3ಜಿ ಫಾರಂ ಸಲ್ಲಿಸಿದ್ದಾರೆ. ಸೆಪ್ಟಂಬರ್‌ನಲ್ಲಿ 45.84ಲಕ್ಷ ಇತ್ತು. ಜುಲೈನಲ್ಲಿ 46.79ಲಕ್ಷ ವ್ಯಾಪಾರಿಗಳು ಜಿಎಸ್‌ಟಿಆರ್-1 ಜುಐಲ್ ಮಾಡಿದ್ದರು, ಆ ಪೈಕಿ ಕೇವಲ 12 ಲಕ್ಷ ವರ್ತಕರು ಮಾತ್ರ ಜಿಎಸ್‌ಟಿಆರ್-2 ಸಲ್ಲಿಕೆ ಮಾಡಿದ್ದಾರೆ. ಇನ್ನೂ ಮೂರು ದಿನ ಬಾಕಿ ಇದ್ದು, ಅಷ್ಟರಲ್ಲಿ ಇನ್ನುಳಿದವರು ಜಿಎಸ್‌ಟಿಆ-2 ಸಲ್ಲಿಕೆ ಮಾಡಬೇಕಿದೆ.
ಖರೀದಿದಾರರು ಮತ್ತು ಪೂರೈಕೆದಾರರು ಇಬ್ಬರೂ ಜಿಎಸ್‌ಟಿಆರ್-1 ಮತ್ತು ಜಿಎಸ್‌ಟಿಆರ್-2ನಲ್ಲಿ ಸಲ್ಲಿಸಿರುವ ಇನ್‌ವಾಯ್ಸ(ಬಿಲ್)ಗಳನ್ನು ತಾಳೆ ಮಾಡಲಾಗುವುದು. ಇದು ಅತಿ ದೊಡ್ಡ ಸವಾಲಿನ ಕೆಲಸ ಎಂದು ಅವರು ತಿಳಿಸಿದರು.
ಜಿಎಸ್‌ಟಿ-ಐಟಿಯ ಸದಸ್ಯರಾದ ಕೃಷಿ ಸಚಿವ ಕೃಷ್ಣ ಬೈರೇಗೌಡ, ತೆಲಂಗಾಣದ ಸಚಿವ ಎತ್ತೆಲ್ಲಾ ರಾಜೇಂದರ್ ಸೇರಿದಂತೆ ಪ್ರಮುಖರು ಹಾಜರಿದ್ದರು.
ದಂಡ ಇಲ್ಲ: ಸ್ಪಷ್ಟನೆ
ಜಿಎಸ್‌ಟಿ ಅನುಷ್ಠಾನದ ವೇಳೆ ಹೇಳಿದ್ದಂತೆ ಮೊದಲ ಆರು ತಿಂಗಳಲ್ಲಿ ಕಾಲ ಕಾಲಕ್ಕೆ ರಿಟರ್ನ್ಸ್ ಸಲ್ಲಿಸದ ಯಾವುದೇ ವ್ಯಾಪಾರಿಗಳ ಮೇಲೆ ದಂಡ ವಿಧಿಸುವುದಿಲ್ಲ ಎಂದು ಜಿಎಸ್‌ಟಿ-ಐಟಿ ಅಧ್ಯಕ್ಷ ಸುಶಿಲ್ ಕುಮಾರ ಮೋದಿ ಸ್ಪಷ್ಟಪಡಿಸಿದರು.