ಒಡಿಶಾದಲ್ಲಿ ಪ್ರಬಲ ಚಂಡಮಾರುತ: ಅಪಾರ ಜೀವ ಹಾನಿ

Update: 2017-10-28 18:45 GMT

*1999: ಒಡಿಶಾದಲ್ಲಿ ಪ್ರಬಲ ಉಷ್ಣವಲಯದ ಚಂಡ ಮಾರುತವೊಂದು ಬೀಸಿದ ಪರಿಣಾಮ ಹಲವು ಪ್ರದೇಶಗಳು ತೀವ್ರ ಹಾನಿಗೀಡಾದವು. 05ಬಿ ಅಥವಾ ಪಾರದೀಪ್ ಎಂದು ಹೆಸರಿಸಲಾದ ಈ ಮಹಾ ಬಿರುಗಾಳಿಗೆ ಸುಮಾರು 10,000 ಜನ ಪ್ರಾಣ ಕಳೆದುಕೊಂಡರು. ಸುಮಾರು 15,00,000 ಜನ ನಿರಾಶ್ರಿತರಾದರು. ಅನಧಿಕೃತ ಮೂಲಗಳ ಪ್ರಕಾರ ಈ ಸಂಖ್ಯೆ ಇನ್ನೂ ಹೆಚ್ಚಾಗಿತ್ತು. ಬಂಗಾಳ ಕೊಲ್ಲಿಯಲ್ಲಿ ಗಂಟೆಗೆ 300 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿತ್ತೆಂದರೆ ಪರಿಣಾಮ ಊಹಿಸಬಹುದು.

* 2005: ಭಾರತದ ರಾಜಧಾನಿ ದಿಲ್ಲಿಯಲ್ಲಿ 3 ಬಾಂಬ್‌ಗಳು ಸ್ಫೋಟಗೊಂಡ ಪರಿಣಾಮ 62 ಜನ ಮೃತರಾದರು. ಕಾಶ್ಮೀರ ಪ್ರತ್ಯೇಕತಾವಾದಿಗಳು ಮತ್ತು ಲಷ್ಕರೆ ತಯ್ಯಿಬಾ ಉಗ್ರರು ಈ ಸ್ಫೋಟದ ಹಿಂದಿನ ರೂವಾರಿಗಳು ಎಂದು ಶಂಕಿಸಲಾಯಿತು.

*1958: ರಷ್ಯನ್ ಕಾದಂಬರಿಕಾರ, ಕವಿ ಬೋರಿಸ್ ಪಾಸ್ಟರ್‌ನ್ಯಾಕ್ ತಮಗೆ ಘೋಷಿಸಿದ ಸಾಹಿತ್ಯದ ನೊಬೆಲ್ ಪುರಸ್ಕಾರವನ್ನು ತಿರಸ್ಕರಿಸಿದರು.

*1960: ಖ್ಯಾತ ಹೆವಿವೇಟ್ ಬಾಕ್ಸಿಂಗ್ ಚಾಂಪಿಯನ್ ಮುಹಮ್ಮದ್ ಅಲಿ ತಮ್ಮ ಮೊದಲ ವೃತ್ತಿಪರ ಪಂದ್ಯದಲ್ಲಿ ಜಯಗಳಿಸಿದರು.

* 2002: ವಿಯೆಟ್ನಾಂನ ಹೊಚಿಮಿನ್ ಪಟ್ಟಣದಲ್ಲಿ ಐಷಾರಾಮಿ ಮಾಲ್‌ವೊಂದಕ್ಕೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ 60 ಜನ ಸಾವಿಗೀಡಾದರು.
*2012: ಜರ್ಮನಿಯ ರ್ಯಾಂಡಮ್ ಹೌಸ್ ಮತ್ತು ಬ್ರಿಟನ್‌ನ ಪೆಂಗ್ವಿನ್ ಪುಸ್ತಕ ಪ್ರಕಾಶನ ಸಂಸ್ಥೆಗಳು ವಿಲೀನಗೊಳ್ಳುವ ಮೂಲಕ ವಿಶ್ವದ ಅತ್ಯಂತ ಬೃಹತ್ ಪ್ರಕಾಶನ ಸಂಸ್ಥೆ ‘ಪೆಂಗ್ವಿನ್ ರ್ಯಾಂಡಮ್ ಹೌಸ್’ ಆಗಿ ಪರಿವರ್ತನೆಯಾಯಿತು. ಇದರ ಮುಖ್ಯ ಕಚೇರಿ ಈಗ ನ್ಯೂಯಾರ್ಕ್ ನಲ್ಲಿದೆ.

* 2012: ವಿಶ್ವ1988: ಸ್ವಾತಂತ್ರ ಹೋರಾಟಗಾರ್ತಿ, ಸಮಾಜ ಸುಧಾರಕಿ ಕಮಲಾದೇವಿ ಚಟ್ಟೋಪಾಧ್ಯಾಯ ಇಂದು ನಿಧನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ