'ಕನ್ನಡ ಅರವಿಂದ-ಚಿರಂಜೀವಿ ಪ್ರಶಸ್ತಿ'ಗೆ ಮಂ.ಅ.ವೆಂಕಟೇಶ್, ರಫಾಯಲ್ ರಾಜ್ ಆಯ್ಕೆ
ಬೆಂಗಳೂರು, ನ.4: ಕನ್ನಡ ಗೆಳೆಯರ ಬಳಗ ಹಾಗೂ ಕರ್ನಾಟಕ ಕಾರ್ಮಿಕ ಲೋಕದ ವತಿಯಿಂದ ಪ್ರತಿವರ್ಷ ನೀಡುವ ‘ಕನ್ನಡ ಅರವಿಂದ ಪ್ರಶಸ್ತಿ’ಗೆ ಮಂ.ಅ.ವೆಂಕಟೇಶ್, ‘ಕನ್ನಡ ಚಿರಂಜೀವಿ ಪ್ರಶಸ್ತಿ’ಗೆ ರಫಾಯಲ್ ರಾಜ್ ಆಯ್ಕೆಯಾಗಿದ್ದು, ನ.7ರಂದು ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಚಿದಾನಂದಮೂರ್ತಿ ವಹಿಸಲಿದ್ದು, ಹಿರಿಯ ಕವಿ ಡಾ.ದೊಡ್ಡರಂಗೇಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ವೇಳೆ ಮುಖ್ಯ ಅತಿಥಿಗಳಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಕಸಾಪ ಕಾರ್ಯದರ್ಶಿ ವ.ಚ.ಚನ್ನೇಗೌಡ, ಕರ್ನಾಟಕ ಕಾರ್ಮಿಕ ಲೋಕದ ಗೌರವ ಸಂಪಾದಕ ರಾ.ನಂ.ಚಂದ್ರಶೇಖರ ಪ್ರಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ಇದೇ ವೇಳೆ ಉಡುಪಿ ಜಿಲ್ಲೆ ಹೆಸಕತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯೋಪಾಧ್ಯಾಯ ಶೇಖರ ಕುಮಾರ, ಸರ್ವೆ ಆಫ್ ಇಂಡಿಯಾದ ಕೇಶವಭಟ್ಟ, ಬಿಎಸ್‌ಎನ್‌ಎಲ್‌ನ ಗೋ.ಮೂರ್ತಿ ಯಾದವ್, ಅಂಚೆ ಇಲಾಖೆಯ ಮಂಜುಳಾಂಬ, ಐಟಿಐನ ವಿಶ್ವನಾಥ್ ಸಫಲ್ಯ, ಮೈಕೋ ರಾಜೇಶ್, ಜಿಟಿಆರ್‌ಇ ವೆಂಕೋಬರಾವ್, ಎಚ್‌ಎಎಲ್ ನಾ.ಪು.ಶಿವಾನಂದಮೂರ್ತಿ, ಎಚ್‌ಎಎಲ್ ಟಿ.ಎನ್.ಸಾಯಿಕುಮಾರ್‌ಗೆ ವಿಶೇಷ ಸನ್ಮಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.