×
Ad

ಜನಪರ ವ್ಯಕ್ತಿಗಳನ್ನು ಆಯ್ಕೆ ಮಾಡಲು 'ಜಾಗೃತಿ ಅಭಿಯಾನ': ಚಂದ್ರಶೇಖರ್

Update: 2017-11-04 18:24 IST

ಬೆಂಗಳೂರು, ನ.4: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರ ಅವಶ್ಯಕತೆಗಳನ್ನು ಪೂರೈಸುವ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡುವ ಕುರಿತಂತೆ ಜನಜಾಗೃತಿ ಮೂಡಿಸಲು ಯುವ ಬ್ರಿಗೇಡ್ ಮುಂದಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ರಿಗೇಡ್‌ನ ಸಂಚಾಲಕ ಚಂದ್ರಶೇಖರ್, ಯಾವುದೇ ಪಕ್ಷದ ಅಭ್ಯರ್ಥಿಯಾಗಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ, ಅದನ್ನು ಪೂರೈಸುವ ಮನೋಭಾವ ಇರಬೇಕು. ನಿಸ್ವಾರ್ಥ ಸೇವೆಯ ಮನಸ್ಸಿರಬೇಕು. ರಾಜ್ಯದ ಜನರ ಕನಸಿನ ಕರ್ನಾಟಕದ ಆಶಯಗಳನ್ನು ಸಾಕಾರಗೊಳಿಸುವ ಕನಸಿರುವ ಅಭ್ಯರ್ಥಿಗಳಿಗೆ ಮತ ನೀಡುವಂತೆ ಸಾರ್ವಜನಿಕರಿಗೆ ಕರಪತ್ರ ಹಂಚುವ ಮೂಲಕ ಹಾಗೂ ಭಾಷಣ, ಸಮಾವೇಶಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ ಎಂದರು.

ನಗರ, ಗ್ರಾಮ ಹಾಗೂ ಪಟ್ಟಣಗಳು ಜನರಿಗೆ ಇಚ್ಛೆಗೆ ತಕ್ಕಂತೆ ರೂಪಗೊಳ್ಳಬೇಕು. ಅದಕ್ಕೆ ಅನುಗುಣವಾಗಿ ನೀಲನಕ್ಷೆ ತಯಾರಿಸಬೇಕು. ಸ್ಥಳೀಯ ಮುಖಂಡರನ್ನು ತಮ್ಮ ಪ್ರದೇಶ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಅವಶ್ಯಕವಿರುವ ಅಂಶಗಳನ್ನು ಕ್ರೋಢೀಕರಿಸಿ ಮತ ಕೇಳಲು ಬರಬೇಕು. ಈ ಬೇಡಿಕೆಗಳನ್ನು ಈಡೇರಿಸಲು ಸಾಮರ್ಥ್ಯವಿರುವ ಅಭ್ಯರ್ಥಿಯನ್ನು ಗುರುತಿಸಿ ಮತ ನೀಡಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ನೀಲಕಂಠ, ಸುಮುಖ, ಪಂಚಾಕ್ಷರಿ, ಮನೋಹರ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News