ಸಕಾಲಿಕ ಚಿಕಿತ್ಸೆಯಿಂದ ಪಾರ್ಶ್ವವಾಯು ತಡೆಗಟ್ಟಲು ಸಾಧ್ಯ: ಡಾ.ಮದನ್ ಗಾಯಕವಾಡ್
Update: 2017-11-04 20:11 IST
ಬೆಂಗಳೂರು, ನ. 4: ಸಕಾಲಿಕ ಪರೀಕ್ಷೆ, ಸೂಕ್ತ ಚಿಕಿತ್ಸೆಯಿಂದ ಪಾರ್ಶ್ವವಾಯುವನ್ನು ತಡೆಗಟ್ಟಲು ಸಾಧ್ಯ ಎಂದು ಸಾಗರ್ ಆಸ್ಪತ್ರೆಯ ಹಿರಿಯ ಉಪಾಧ್ಯಕ್ಷ ಡಾ.ಮದನ್ ಗಾಯಕವಾಡ್ ಹೇಳಿದ್ದಾರೆ.
ಶನಿವಾರ ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ಆಸ್ಪತ್ರೆಯಿಂದ ಏರ್ಪಡಿಸಿದ್ದ ‘ಟಾಕಥಾನ್’ ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಾರ್ಶ್ವವಾಯು ಗುಣಪಡಿಸಬಲ್ಲ ಹಾಗೂ ತಡೆಯಬಲ್ಲ ರೋಗವಾಗಿದೆ ಎಂದರು.
ಡಾ.ವೇಣುಗೋಪಾಲ್ ಮಾತನಾಡಿ, ದೇಶದಲ್ಲಿ ಪಾರ್ಶ್ವವಾಯು ಸಾವಿಗೆ ಎರಡನೆ ದೊಡ್ಡ ಕಾರಣ. ಆದುದರಿಂದ ಈ ಬಗ್ಗೆ ನಿರ್ಲಕ್ಷತೆ ಸರಿಯಲ್ಲ. ಜೀವನ ಶೈಲಿನಲ್ಲಿ ಬದಲಾವಣೆಯಿಂದ ಪಾರ್ಶ್ವವಾಯು ತಡೆಗಟ್ಟಲು ಸಾಧ್ಯ ಎಂದರು.