ಸರಿತಾ, ಸೋನಿಯಾ ಸೆಮಿಫೈನಲ್‌ಗೆ

Update: 2017-11-05 18:39 GMT

  ಹೊ ಚಿ ಮಿನ್ ಸಿಟಿ, ನ.5: ಇಲ್ಲಿ ನಡೆಯುತ್ತಿರುವ ವನಿತೆಯರ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳಾ ಬಾಕ್ಸರ್‌ಗಳಾದ ಮಾಜಿ ವಿಶ್ವ ಚಾಂಪಿಯನ್ ಎಲ್.ಸರಿತಾದೇವಿ ಮತ್ತು ವಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಜಯಿಸಿದ್ದ ಸೋನಿಯಾ ಲಾಥೆರ್ ಸೆಮಿಫೈನಲ್ ತಲುಪಿದ್ದಾರೆ.

 ಇಂದು ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಸರಿತಾ ದೇವಿ ಅವರು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 6ನೆ ಬಾರಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.ಅವರು 64 ಕೆ.ಜಿ ವಿಭಾಗದಲ್ಲಿ ಉಜ್ಬೇಕಿಸ್ತಾನದ ಮಫ್ತುನಾಕೋನ್ ಮೆಲೀವಾ ವಿರುದ್ಧ ಜಯ ಗಳಿಸಿದರು.

 ಸೋನಿಯಾ ಅವರು 57 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಕಝಕಿಸ್ತಾನದ ನಾಝ್ಯಮ್ ಐಚಾಶಾನೊವಾ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಗೆಲುವು ಸಾಧಿಸಿದರು. ಈ ವರ್ಷದ ಆರಂಭದಲ್ಲಿ ವೃತ್ತಿಪರ ಬಾಕ್ಸಿಂಗ್ ಪ್ರವೇಶಿಸಿದ್ದ ಸರಿತಾ ಈ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದರು. ಇದಕ್ಕೂ ಮೊದಲು ರಾಷ್ಟ್ರೀಯ ಚಾಂಪಿಯನ್ ನೀರಜ್ 51 ಕೆ.ಜಿ. ವಿಭಾಗದಲ್ಲಿ ಚೀನಾ ತೈಪೆಯ ಚೋಲ್ ಮಿ ಪಾಂಗ್ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಅನುಭವಿಸಿದ್ದರು. ಶನಿವಾರ ನಡೆದ ಸ್ಪರ್ಧೆಯಲ್ಲಿ ಭಾರತದ ಒಲಿಂಪಿಕ್ಸ್ ಪದಕ ಪಡೆದ ಎಂ.ಸಿ.ಮೇರಿ ಕೋಮ್(48 ಕೆ.ಜಿ), ಪ್ರಿಯಾಂಕಾ ಚೌಧರಿ(60 ಕೆ.ಜಿ),ಶಿಕ್ಷಾ (54 ಕೆ.ಜಿ) ಅವರು ಸೆಮಿಫೈನಲ್ ತಲುಪಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News