ಪ್ರತ್ಯೇಕ ಪ್ರಕರಣ: ಮೂರು ಕಡೆ ಮನೆಗಳಿಗೆ ನುಗ್ಗಿ ನಗದು, ಚಿನ್ನಾಭರಣ ಕಳವು
ಬೆಂಗಳೂರು, ನ. 6: ನಗರ ವ್ಯಾಪ್ತಿಯಲ್ಲಿ ಮೂರು ಕಡೆ ಮನೆಗಳಿಗೆ ನುಗ್ಗಿ ನಗದು ಚಿನ್ನಾಭರಣ ಕಳವು ಮಾಡಿರುವ ಘಟನೆ ನಡೆದಿದೆ.
ಜಯನಗರ: ಇಲ್ಲಿನ 9ನೆ ಮುಖ್ಯರಸ್ತೆಯ ನಿವಾಸಿ ತಿಮ್ಮಪ್ಪಎಂಬವರು ನ.4 ರಂದು ತಿರುಪತಿಗೆ ಹೋಗಿದ್ದ ವೇಳೆ ದುಷ್ಕರ್ಮಿಗಳು ಮನೆಯ ಬೀಗ ಒಡೆದು 40 ಸಾವಿರ ಮೌಲ್ಯದ ಆಭರಣ ಕಳವು ಮಾಡಿದ್ದಾರೆ.
ಮಹದೇವಪುರ: ಎಸ್‌ಆರ್‌ಆರ್ ಲೇಔಟ್‌ನ ಮೂರನೆ ಮುಖ್ಯರಸ್ತೆ ನಿವಾಸಿ ಸುರೇಶ್‌ಕುಮಾರ್ ಎಂಬುವರು ನ.1ರಂದು ಕುಟುಂಬ ಸಮೇತ ತಮಿಳುನಾಡಿಗೆ ತೆರಳಿದ್ದಾಗ ದುಷ್ಕರ್ಮಿಗಳು ಇವರ ಮನೆಯ ಹಿಂಬಾಗಿಲು ಒಡೆದು ಒಳನುಗ್ಗಿ ಬೀರುನಲ್ಲಿದ್ದ 2.50ಲಕ್ಷ ರೂ. ಮೌಲ್ಯದ ಆಭರಣ ಕಳವು ಮಾಡಿದ್ದಾರೆ ಎನ್ನಲಾಗಿದೆ.
ಕರ್ಮಯಲ್ ಸ್ಟ್ರೀಟ್: ಬೌರಿಂಗ್ ಆಸ್ಪತ್ರೆ ಸಮೀಪದ ನಿವಾಸಿ ಕಮಲಾ ಎಂಬವರು ರವಿವಾರ ಸಂಜೆ ಹೊರಗೆ ಹೋಗಿದ್ದಾಗ ದುಷ್ಕರ್ಮಿಗಳು ಇವರ ಮನೆಯ ಬೀಗ ಒಡೆದು ಒಳನುಗ್ಗಿ ಬೀರುವನ್ನು ಮೀಟಿ 750 ಗ್ರಾಂ ಬೆಳ್ಳಿ ವಸ್ತುಗಳು, 30 ಸಾವಿರ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಮೂರು ಪ್ರಕರಣಗಳನ್ನು ಆಯಾ ಠಾಣೆ ಪೊಲೀಸರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.