ಸರಗಳ್ಳತನ ಪ್ರಕರಣ: ಆರೋಪಿಯನ್ನು ಬೆನ್ನಟ್ಟಿ ಹಿಡಿದ ಸಾರ್ವಜನಿಕರು
Update: 2017-11-06 18:23 IST
ಬೆಂಗಳೂರು, ನ.6: ಮಹಿಳೆಯಿಂದ ಚಿನ್ನದ ಸರ ಕಸಿದು ಪರಾರಿಯಾಗುತ್ತಿದ್ದ ಇಬ್ಬರನ್ನು ಸಾರ್ವಜನಿಕರೆ ಹಿಡಿದು ಪೊಲೀಸರಿಗೊಪ್ಪಿಸಿರುವ ಘಟನೆ ತ್ಯಾಮಗೊಂಡ್ಲುವಿನ ತೋಟನಹಳ್ಳಿ ಬಳಿ ನಡೆದಿದೆ.
ನೆಲಮಂಗಲದ ಹೇಮಂತ್ ಹಾಗೂ ವಿನಯ್ ಬಂಧಿತ ಆರೋಪಿಗಳೆಂದು ತಿಳಿದು ಬಂದಿದೆ.
ದ್ವಿಚಕ್ರ ವಾಹನದಲ್ಲಿ ಬಂದಿದ್ದ ಈ ಇಬ್ಬರು ದುಷ್ಕರ್ಮಿಗಳು ನಗರದ ತೋಟನಹಳ್ಳಿ ಬಳಿ ಮಂಜುಳಾ ಎಂಬುವರಿಗೆ ಚಾಕು ತೋರಿಸಿ ಅವರ ಕತ್ತಿನಲ್ಲಿದ್ದ ಸರ ಕಸಿದು ಪರಾರಿಯಾಗಲು ಯತ್ನಿಸಿದ್ದಾರೆ.
ಸರವನ್ನು ಗಟ್ಟಿಯಾಗಿ ಹಿಡಿದು ಕೊಂಡ ಮಂಜುಳಾ ರಕ್ಷಣೆಗಾಗಿ ಕೂಗಿಕೊಂಡಿದ್ದು, ಹತ್ತಿರದಲ್ಲಿದ್ದ ಸ್ಥಳೀಯರು ಓಡಿ ಬಂದು ಇಬ್ಬರನ್ನು ಬೆನ್ನಟ್ಟಿ ಹಿಡಿದು ತ್ಯಾಮಗೊಂಡ್ಲು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.