×
Ad

ನ.9 ರಿಂದ ಫುಟ್‌ ಬಾಲ್ ಟೂರ್ನಮೆಂಟ್

Update: 2017-11-06 18:24 IST

ಬೆಂಗಳೂರು, ನ.6: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ವತಿಯಿಂದ ವಾರ್ಷಿಕ ಅಂತರ ಕಾಲೇಜು ಪುರುಷರ ಫುಟ್‌ಬಾಲ್ ಟೂರ್ನಮೆಂಟ್ ಅನ್ನು ನ.9 ಮತ್ತು 10 ರಂದು ನಗರದ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಕಾನೂನು ಅಧ್ಯಯನ ಸಂಸ್ಥೆಯ ಪ್ರಾಂಶುಪಾಲೆ ಪ್ರೀತಿ ಎಸ್.ದೇಸಾಯಿ, ಈ ಬಾರಿಯ ವಿವಿ ಮಟ್ಟದ ಟೂರ್ನಮೆಂಟ್ ಅನ್ನು ನಮ್ಮ ಸಂಸ್ಥೆಯು ನಿರ್ವಹಣೆ ವಹಿಸಿಕೊಂಡಿದೆ. ಈ ಟೂರ್ನಮೆಂಟ್‌ನಲ್ಲಿ 15 ಕ್ಕೂ ಅಧಿಕ ಕಾಲೇಜುಗಳು ಭಾಗವಹಿಸಲಿವೆ. ಟೂರ್ನಮೆಂಟ್ ಅನ್ನು ಅಂತಾರಾಷ್ಟ್ರೀಯ ಆಟಗಾರ್ತಿ ತನ್ವೀ ಹೆನ್ಸ್ ಉದ್ಘಾಟಿಸಲಿದ್ದು, ವಿವಿಯ ಕ್ರೀಡಾ ವಿಭಾಗದ ನಿರ್ದೇಶಕ ಖಾಲಿದ್ .ಕೆ. ಖಾನ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News