ಕನ್ನಡಿಗರಿಗೆ ಆದ್ಯತೆ ನೀಡಲು ಆಮ್ ಆದ್ಮಿ ಆಗ್ರಹ
ಬೆಂಗಳೂರು, ನ.6: ಗ್ರಾಮೀಣ ಬ್ಯಾಂಕ್‌ಗಳ ಉದ್ಯೋಗಕ್ಕಾಗಿ ಸರಕಾರ ನಡೆಸುವ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆಮ್‌ಆದ್ಮಿ ಪಕ್ಷ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ರಾಜ್ಯ ಸಹ ಸಂಚಾಲಕ ಮೋಹನ್ ದಾಸರಿ, ಬ್ಯಾಂಕ್‌ಗಳ ಕೆಲಸದ ಆಕಾಂಕ್ಷಿಗಳನ್ನು ಅವರ ಪ್ರತಿಭೆಯ ಪ್ರಕಾರ ಅಂಕ ನೀಡಿ, ಕೇವಲ ಅವರ ತಾಂತ್ರಿಕ ಸಾಮರ್ಥ್ಯದ ದಕ್ಷತೆಯಷ್ಟೇ ಅಲ್ಲದೆ, ಅವರ ಮೂಲ ಸ್ಥಾನ, ಸ್ಥಳೀಯ ಭಾಷೆ ಜ್ಞಾನದ ಆಧಾರದ ಮೇಲೆ ಅರ್ಹರಿಗೆ ಅವಕಾಶ ನೀಡಬೇಕು. ಇದರಿಂದ ರಾಜ್ಯದವರಿಗೂ ಅವಕಾಶ ಸಿಗುತ್ತದೆ. ಹೊರ ರಾಜ್ಯದವರಿಗೆ ಇದರಿಂದ ಯಾವುದೇ ಅನ್ಯಾಯವಾಗುವುದಿಲ್ಲ ಎಂದು ಹೇಳಿದರು.
ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್, ಕಾವೇರಿ ಗ್ರಾಮೀಣ ಬ್ಯಾಂಕ್ ಮತ್ತು ಪ್ರಗತಿ ಕೃಷ್ಣಾ ಬ್ಯಾಂಕ್‌ಗಳಲ್ಲಿನ ಉದ್ಯೋಗಕ್ಕಾಗಿ ನಡೆಯುವ ಪರೀಕ್ಷೆಗಳಲ್ಲಿ ಕನ್ನಡಿಗರಿಗಾದ ಅನ್ಯಾಯವನ್ನು ಖಂಡಿಸಿ ಇನ್ನೂ ಹೋರಾಟ ಮಾಡುತ್ತಲೇ ಇದ್ದಾರೆ. ಹೀಗಾಗಿ, ಗ್ರಾಮೀಣ ಬ್ಯಾಂಕ್‌ಗಳಲ್ಲಿ ಕನ್ನಡಿಗರಿಗೆ ಅವಕಾಶ ಸಿಗುವಂತೆ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.