×
Ad

ಕಳವು ಪ್ರಕರಣ: ಆರೊಪಿ ಬಂಧನ

Update: 2017-11-10 18:23 IST

ಬೆಂಗಳೂರು, ನ. 10: ಕಳವು ಪ್ರಕರಣ ಸಂಬಂಧ ಆರೋಪಿಯೊಬ್ಬನನ್ನು ಕೆಂಗೇರಿ ಪೊಲೀಸರು ಬಂಧಿಸಿ ಹನ್ನೊಂದು ಪ್ರಕರಣಗಳನ್ನು ಪತ್ತೆ ಹಚ್ಚಿ 9 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಹೆಸರಘಟ್ಟದ ಹುರಳಿಚಿಕ್ಕನಹಳ್ಳಿಯ ಮಂಜೇಶ್ ಯಾನೆ ಮಂಜ(34) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಈತನ ಬಂಧನದಿಂದ ಕೆಂಗೇರಿಯ ವಿವಿಧೆಡೆ ನಡೆದಿದ್ದ 2 ಕನ್ನಗಳವು, 6 ಮನೆಗಳವು, 2 ಗಮನ ಸೆಳೆದು ವಂಚನೆ ನಡೆಸಿದ್ದ 2 ಪ್ರಕರಣಗಳು ಸೇರಿ 11 ಪ್ರಕರಣಗಳು ಪತ್ತೆಯಾಗಿದೆ ಎಂದು ಡಿಸಿಪಿ ಅನುಚೇತ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News