ಧೋನಿ ನಿವೃತ್ತಿಗೆ ಒತ್ತಾಯಿಸಿದ ಅಗರ್ಕರ್‌ಗೆ ಸಾಮಾಜಿಕ ಜಾಲತಾಣದಲ್ಲಿ ತರಾಟೆ

Update: 2017-11-11 08:04 GMT

 ಹೊಸದಿಲ್ಲಿ, ನ.11: ಇತ್ತೀಚೆಗೆ ಅಭಿವ್ಯಕ್ತಿ ಸ್ವಾತಂತ್ರಕ್ಕೂ ಕುತ್ತು ಬಂದಿದೆ. ಮಾಜಿ ನಾಯಕ ಎಂಎಸ್ ಧೋನಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಪ್ರಸ್ತುತ ಕಳಪೆ ಫಾರ್ಮ್‌ನಲ್ಲಿದ್ದು, ಅವರು ನಿವೃತ್ತಿಯಾಗುವ ಮೂಲಕ ಯುವ ಆಟಗಾರರಿಗೆ ಅವಕಾಶ ನೀಡಬೇಕೆಂದು ಮಾಜಿ ಆಲ್‌ರೌಂಡರ್ ಅಜಿತ್ ಅಗರ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಧೋನಿ ಅಭಿಮಾನಿಗಳು, ಧೋನಿಯ ಬಗ್ಗೆ ಅಗರ್ಕರ್ ಹೇಳಿಕೆಯು'ಪ್ರಧಾನಿ ಹುದ್ದೆಯ ಬಗ್ಗೆ ಸ್ಥಳೀಯ ಶಾಸಕ ಮಾತನಾಡಿದ್ದಂತಾಯಿತು' ಎಂದು ವ್ಯಂಗ್ಯವಾಡಿದ್ದಾರೆ. ಈ ಮೂಲಕ ಧೋನಿ ಪ್ರಶ್ನಾತೀತ. ಆತನನ್ನು ಯಾರೂ ಪ್ರಶ್ನಿಸಬಾರದು ಎಂದು ಅಭಿಮಾನಿಗಳು ಫರ್ಮಾನು ಹೊರಡಿಸಿದ್ದಾರೆ. ಅಗರ್ಕರ್ ಹೇಳಿಕೆಯ ಬಗ್ಗೆ ಧೋನಿ ಅಭಿಮಾನಿಗಳು ಏನು ಟ್ವೀಟ್ ಮಾಡಿದ್ದಾರೆಂದು ನೋಡೋಣ ಬನ್ನಿ...

‘‘ಮಿಸ್ಟರ್ ಅಗರ್ಕರ್ ಅವರೇ, ಎಂಎಸ್ ಧೋನಿ ಶ್ರೇಷ್ಠ ಆಟಗಾರ ಹಾಗೂ ನಾಯಕ. ನೀವು ನಿಮ್ಮ ದಾಖಲೆ ನೋಡಿಕೊಳ್ಳಿ. ಆನಂತರ ಎಂಎಸ್‌ಡಿ ಬಗ್ಗೆ ಆಲೋಚನೆ ಮಾಡಿ’’-ವಿಷ್ಣು ಮೀನಾ.

 ‘‘ಎಂಎಸ್ ಧೋನಿಯ ಬಗ್ಗೆ ಅಗರ್ಕರ್ ಹೇಳಿಕೆಯು ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಧೋನಿ ಯಾವಾಗಲೂ ಸೀಮಿತ ಓವರ್ ಕ್ರಿಕೆಟ್‌ನ ಮಾಸ್ಟರ್ ಆಗಿದ್ದಾರೆ. ನೀವು ಆತನಿಗೆ ಗೌರವ ಕೊಡಬೇಕಾಗಿತ್ತು. ನಿಮ್ಮ ಹೇಳಿಕೆಯು ಸ್ಥಳೀಯ ಎಂಎಲ್‌ಎವೊಬ್ಬ ಪ್ರಧಾನಿ ಹುದ್ದೆಯ ಬಗ್ಗೆ ಮಾತನಾಡಿದ್ದಂತಾಗಿದೆ’’-ಶುಭಂ ಕವತ್ರ.

‘‘ನಿಮಗೆ ಮಾಡಲು ಬೇರೆ ಯಾವುದೇ ಕೆಲಸ ಇರದೇ ಇದ್ದರೆ, ನೀವು ಮಾಧ್ಯಮಗಳ ಗಮನ ಸೆಳೆಯಲು ಬಯಸುತ್ತೀರಿ. ಅಂತಹ ಆಟಗಾರರಲ್ಲಿ ಅಗರ್ಕರ್ ಉತ್ತಮ ನಿದರ್ಶನ. ಧೋನಿ ಬಗ್ಗೆ ಹೇಳಿಕೆ ನಿಮಗೆಷ್ಟು ಧೈರ್ಯ’’-ಪ್ರಮೋದ್ ಸಿಂಗ್.

‘‘ಭಾರತ ಕಂಡ ಅತ್ಯಂತ ಶ್ರೇಷ್ಠ ಆಟಗಾರನ ಕುರಿತು ಹೇಳಿಕೆ ನೀಡುವ ಅರ್ಹತೆ ನಿಮಗಿಲ್ಲ. ಯಾರು ಯಾವಾಗ ನಿವೃತ್ತಿಯಾಗಬೇಕೆಂದು ನೀವು ನಿರ್ಧರಿಸುವುದಲ್ಲ. ಇಂತಹ ಬೇಡಿಕೆ ನಿಮ್ಮ ಇಮೇಜ್‌ನ್ನು ಕುಂದಿಸುತ್ತದೆ’’-ಗ್ಯಾನ್ ರಂಜನ್.

 ‘‘ಧೋನಿಯ ರಾಜೀನಾಮೆ ಕೇಳುವ ಜನರು ಮೊದಲು ಭಾರತಕ್ಕೆ ತಾವೇನು ಕೊಡುಗೆ ನೀಡಿದ್ದೇವೆಂದು ಹೇಳಲಿ. ಅಗರ್ಕರ್, ಆಕಾಶ್ ಚೋಪ್ರಾ ಉತ್ತಮ ಆಟಗಾರರಾಗಿರಲಿಲ್ಲ’’-ಸಂದೇಶ್ ಸಿಂಗ್.

‘‘ಎಂಎಸ್ ಧೋನಿಯ ನಿವೃತ್ತಿಗೆ ಆಗ್ರಹಿಸುವ ಮೂಲಕ ಅಗರ್ಕರ್ ಜನಪ್ರಿಯರಾಗಲು ಪ್ರಯತ್ನಿಸುವುದು ಬೇಡ. ನೀವು 20ನೆ ವಯಸ್ಸಿನಲ್ಲಿ ಆಡಿದ್ದಕ್ಕಿಂತ ಉತ್ತಮವಾಗಿ ಧೋನಿ 36ನೆ ವಯಸ್ಸಿನಲ್ಲಿ ಆಡುತ್ತಿದ್ದಾರೆ. ಧೋನಿಯನ್ನು ಟ್ರೊಲ್ ಮಾಡುವುದನ್ನು ನಿಲ್ಲಿಸಿ’’-ಜಿಗ್ನೇಶ್ ಸಿಂಗ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News