ನನಗೆ ಈಗಲೂ ಬ್ಯಾಡ್ಮಿಂಟನ್ ಬಗ್ಗೆ ಹೆಚ್ಚು ಗೊತ್ತಿಲ್ಲ: ಗೋಪಿಚಂದ್

Update: 2017-11-11 09:30 GMT

ಬೆಂಗಳೂರು, ನ.11:‘‘ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ 30 ವರ್ಷಗಳನ್ನು ಕಳೆದಿದ್ದರೂ ಆ ಕ್ರೀಡೆಯ ಬಗ್ಗೆ ನನಗೆ ಇನ್ನೂ ಹೆಚ್ಚೇನೂ ಗೊತ್ತಿಲ್ಲ. ನಾನು ಬ್ಯಾಡ್ಮಿಂಟನ್‌ಗೆ ಪ್ರವೇಶಿಸಿದ ಸಂದರ್ಭದಲ್ಲಿ ಕ್ರಿಕೆಟ್ ಹಾಗೂ ಟೆನಿಸ್‌ಗೆ ಪ್ರವೇಶವಿರಲಿಲ್ಲ. ಆಗ ಯಾರಿಗೂ ಬ್ಯಾಡ್ಮಿಂಟನ್‌ನಲ್ಲಿ ಆಸಕ್ತಿ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಬೇರೆ ದಾರಿಯಿಲ್ಲದೆ ನಾನು ಬ್ಯಾಡ್ಮಿಂಟನ್ ಕ್ರೀಡೆಯನ್ನು ಆಯ್ದುಕೊಂಡಿದ್ದೆ’’ಎಂದು ಭಾರತದ ಬ್ಯಾಡ್ಮಿಂಟನ್ ಕೋಚ್ ಪಿ.ಗೋಪಿಚಂದ್ ಹೇಳಿದ್ದಾರೆ.

‘‘ನಾನು 2004ರಲ್ಲಿ ಕೋಚಿಂಗ್ ವೃತ್ತಿ ಆರಂಭಿಸಿದಾಗ ಕೋಚಿಂಗ್‌ಗೆ ಬರುವ ಆಕಾಂಕ್ಷಿಗಳ ಶ್ರೇಷ್ಠತೆಯನ್ನು ಗುರುತಿಸಿ ಅವರನ್ನು ಮತ್ತಷ್ಟು ಉತ್ತಮಪಡಿಸಲು ಯತ್ನಿಸುತ್ತಿದ್ದೆ. ಒಂದು ಬಾರಿ ಅಕಾಡೆಮಿ ಸೇರಿದ ಎಳೆ ಹುಡುಗಿಯೊಂದು ನನ್ನ ಬಳಿ ಬಂದು ಶಟ್ಲಲ್‌ನ್ನು ಹಿಡಿದುಕೊಳ್ಳುವುದು ಹೇಗೆಂದು ಕೇಳಿತ್ತು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News