ಕ್ಷಿಪಣಿ ಕಾರ್ಯಕ್ರಮದ ಬಗ್ಗೆ ಮಾತುಕತೆ ಸಾಧ್ಯವಿಲ್ಲ: ಇರಾನ್

Update: 2017-11-12 16:01 GMT

ದುಬೈ, ನ. 12: ಇರಾನ್‌ನ ಪ್ರಕ್ಷೇಪಕ ಕ್ಷಿಪಣಿಗಳ ಕುರಿತು ಚರ್ಚೆ ನಡೆಯಬೇಕೆಂಬ ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್‌ರ ಕರೆಯನ್ನು ಇರಾನ್ ರವಿವಾರ ತಿರಸ್ಕರಿಸಿದೆ. ಪ್ರಕ್ಷೇಪಕ ಕ್ಷಿಪಣಿಗಳನ್ನು ರಕ್ಷಣೆಗಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಹಾಗೂ ಜಾಗತಿಕ ಶಕ್ತ ರಾಷ್ಟ್ರಗಳೊಂದಿಗೆ ಸಹಿ ಹಾಕಲಾದ ಒಪ್ಪಂದಕ್ಕೆ ಅದು ಸಂಬಂಧ ಹೊಂದಿಲ್ಲ ಎಂದು ಹೇಳಿದೆ.

ಇರಾನ್‌ನ ಪ್ರಕ್ಷೇಪಕ ಕ್ಷಿಪಣಿ ಕಾರ್ಯಕ್ರಮದಿಂದ ತಾನು ‘ಚಿಂತಿತನಾಗಿದ್ದೇನೆ’ ಎಂಬುದಾಗಿ ಗುರುವಾರ ದುಬೈಗೆ ಭೇಟಿ ನೀಡಿದ್ದ ಮ್ಯಾಕ್ರೋನ್ ಹೇಳಿದ್ದರು.

ಆದರೆ, ಇದಕ್ಕೆ ಪ್ರತಿಕ್ರಿಯಿಸಿದ ಇರಾನ್ ವಿದೇಶ ಸಚಿವಾಲಯದ ವಕ್ತಾರ ಬಹ್ರಾಮ್ ಖಾಸೀಮಿ, ‘‘ತನ್ನ ರಕ್ಷಣಾ ವ್ಯವಹಾರಗಳ ಬಗ್ಗೆ ಮಾತುಕತೆಯಿಲ್ಲ ಎಂಬ ಇರಾನ್‌ನ ನಿಲುವಿನ ಬಗ್ಗೆ ಫ್ರಾನ್ಸ್‌ಗೆ ಚೆನ್ನಾಗಿ ತಿಳಿದಿದೆ’’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News