ಚೀನಾದ ಈ ಒಂದು ನಗರದ ಆರ್ಥಿಕತೆ ಇಡೀ ಯುಎಇ ದೇಶದ ಆರ್ಥಿಕತೆಗೆ ಸಮ !

Update: 2017-11-13 10:10 GMT

ಬೀಜಿಂಗ್,ನ.13 :  ಆರ್ಥಿಕ ಪ್ರಗತಿಯತ್ತ  ಕಳೆದ ಹಲವಾರು ದಶಕಗಳಿಂದ ದಾಪುಗಾಲಿಡುತ್ತಿರುವ ಚೀನಾದ ಹಲವು ನಗರಗಳ ಆರ್ಥಿಕತೆ  ಕೆಲವೊಂದು ದೇಶಗಳ ಆರ್ಥಿಕತೆಗೆ ಸಮನಾಗಿವೆ ಎಂದರೆ ಆಶ್ಚರ್ಯ ಉಂಟಾಗುವುದಲ್ಲವೇ?. ವಿಜ್ಯುವಲಿಸ್ಟ್ ಕ್ಯಾಪಿಟಲಿಸ್ಟ್ ಅಧ್ಯಯನವೊಂದರ ಪ್ರಕಾರ ಚೀನಾದ ಒಟ್ಟು 35 ನಗರಗಳ ಜಿಡಿಪಿ ಒಂದು ಇಡೀ ದೇಶದ ಜಿಡಿಪಿಗೆ  ಸಮನಾಗಿದೆ.

ಉದಾಹರಣೆಗೆ ಚೀನಾದ ರಾಜಧಾನಿ ಬೀಜಿಂಗ್ ಆರ್ಥಿಕತೆಯು ಇಡೀ ಯುಎಇ ದೇಶದ ಆರ್ಥಿಕತೆಗೆ ಸಮನಾಗಿದೆ. ಅಂತೆಯೇ 810 ಬಿಲಿಯನ್ ಡಾಲರ್ ಜಿಡಿಪಿ ಹೊಂದಿರುವ ಶಾಂಘೈ ನಗರದ ಆರ್ಥಿಕತೆಯನ್ನು ಫಿಲಿಪ್ಪೀನ್ಸ್ ದೇಶದ ಆರ್ಥಿಕತೆಗೆ ಹೋಲಿಸಬಹುದಾಗಿದೆ. ಚೀನಾದ ಯಾಂಗ್ಟ್ಝೆ ನದಿಯ ಮುಖಜ ಭೂಮಿ ಯಾ  ಡೆಲ್ಟಾ  ಇಟಲಿ ದೇಶದಷ್ಟು ದೊಡ್ಡದಿದೆ.

ಅಷ್ಟೇ ಏಕೆ, ಚೀನಾದ ಸುಝೌ, ವುಹಾನ್, ತಂಗ್ಶನ್ ನಗರಗಳು ಆಸ್ಟ್ರೇಲಿಯಾ, ಇಸ್ರೇಲ್ ಅಥವಾ ನ್ಯೂಜಿಲೆಂಡ್ ನಷ್ಟೇ ಶ್ರೀಮಂತವಾಗಿವೆ.

ಚೀನಾ ದೇಶದಲ್ಲಿ ಮೂರು ಮೆಗಾ ಪ್ರದೇಶಗಳಿವೆ. ಅವುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಯಾಂಗ್ಟ್ಝೆ ರಿವರ್ ಡೆಲ್ಟಾ : 

ಒಟ್ಟು 2.17 ಟ್ರಿಲಿಯನ್ ಜಿಡಿಪಿ  ಇರುವ  ಈ ಪ್ರದೇಶ ಶಾಂಘಾಯ್, ಸುಝೌ, ಹಾಂಗ್‍ಃಝೌ, ವುಕ್ಸಿ, ನಿಂಗ್‍ಬೊ ಹಾಗೂ ಚಾಂಗ್‍ಝೌ ಪ್ರದೇಶಗಳನ್ನು ಒಗ್ಗೂಡಿಸುತ್ತದೆ. ಈ ಪ್ರದೇಶದ ಆರ್ಥಿಕತೆ ಇಟಲಿಯ ಆರ್ಥಿಕತೆಗೆ ಸಮನಾಗಿದೆ.

ಪರ್ಲ್ ರಿವರ್ ಡೆಲ್ಟಾ :

ಒಟ್ಟು 1.87 ಟ್ರಿಲಿಯನ್ ಡಾಲರ್ ಜಿಡಿಪಿ ಇರುವ ಈ ಪ್ರದೇಶ ಹಾಂಗ್ ಕಾಂಗ್, ಗೌಂಗ್ ಝೌ, ಶೆನ್ಝೆನ್, ಫೊಶನ್, ಡೊಂಗುವನ್ ಹಾಗೂ ಮಕಾವೊ ನಗರಗಳನ್ನು ಒಗ್ಗೂಡಿಸುತ್ತದೆಯಲ್ಲದೆ ಈ  ಪ್ರದೇಶದ ಆರ್ಥಿಕತೆ ದಕ್ಷಿಣ ಕೊರಿಯದ ಆರ್ಥಿಕತೆಗೆ ಸಮನಾಗಿದೆ.

ಬೀಜಿಂಗ್-ಟಿಯನ್‍ಜಿನ್ : 

ಒಟ್ಟು 1.14 ಟ್ರಿಲಿಯನ್ ಡಾಲರ್ ಜಿಡಿಪಿ ಇರುವ ಈ ಪ್ರದೇಶ ಉತ್ತರ ಚೀನಾದ ಎರಡು ಅತಿ ದೊಡ್ಡ ನಗರಗಳಾದ ಬೀಜಿಂಗ್ ಹಾಗೂ ಟಿಯನ್‍ಜಿನ್ ಇವುಗಳನ್ನು ಒಗ್ಗೂಡಿಸುತ್ತಿದೆ. ಈ ಪ್ರದೇಶದ ಆರ್ಥಿಕತೆ ಆಸ್ಟ್ರೇಲಿಯಾದ ಆರ್ಥಿಕತೆಗೆ ಸಮನಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News