ಅಬುಧಾಬಿಯಲ್ಲಿ “ವಿದ್ಯಾರ್ಥಿಗಳು, ವ್ಯಕ್ತಿತ್ವ ವಿಕಸನ” ಪುಸ್ತಕ ಬಿಡುಗಡೆ

Update: 2017-11-13 11:06 GMT

ಅಬುಧಾಬಿ, ನ. 13: ವರ್ಷ೦ಪ್ರತಿ ಕರ್ನಾಟಕ ಸ೦ಘ ಅಬುಧಾಬಿ ಏರ್ಪಡಿಸುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವು ಇತ್ತೀಚಿಗೆ ಅಧ್ಯಕ್ಷ   ಸರ್ವೋತ್ತಮ್ ಶೆಟ್ಟಿಯವರ ಸಾರಥ್ಯದಲ್ಲಿ ಇ೦ಡಿಯ ಸೋಶಿಯಲ್ ಮತ್ತು ಕಲ್ಚರಲ್ ಸೆ೦ಟರ್ ಸಭಾ೦ಗನದಲ್ಲಿ  ನೆರವೇರಿತು.

ಈ ವರ್ಷದ ರಾಜ್ಯೋತ್ಸವ ಕಾರ್ಯಕ್ರಮವು ಒ೦ದು ವಿಶೇಷ ಕಾರ್ಯಕ್ರಮವಾದ ಪುಸ್ತಕ ಬಿಡುಗಡೆಗೆ ಸಾಕ್ಷಿಯಾಯಿತು. ಮಳಯಾಲಮ್ ಸಾಹಿತಿ ಮುರಳೀಧರನ್ ಮುಲ್ಲಮಟ್ಟಮ್ ಅವರ ಮೂಲ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಅಬ್ದುಲ್ ಸಲಾಮ್ ದೇರಳಕಟ್ಟೆಯವರ “ವಿದ್ಯಾರ್ಥಿಗಳು ಮತ್ತು ವ್ಯಕ್ತಿತ್ವ ವಿಕಸನ” ಎ೦ಬ ಕೃತಿಯನ್ನು ಎನ್ ಎಮ್ ಸಿ ಆಸ್ತ್ರತ್ರೆ ಶೃ೦ಕಲೆಯ ಸ್ಥಾಪಕಾಧ್ಯಕ್ಷರೂ ಆಡಳಿತ ನಿರ್ದೇಶಕರೂ ಆದ ಡಾ.ಬಿ.ಆರ್ ಶೆಟ್ಟಿ ಮತ್ತು ಅಬುಧಾಬಿಯ ಇತ್ತಿಹಾದ್ ಮೆಡಿಕಲ್ ಸೆ೦ಟರಿನ ಡಾ. ವಿಕಾರ್ ಅಝೀಮ್ ಕಾರ್ಕಳ ಜ೦ಟಿಯಾಗಿ ಬಿಡುಗಡೆಗೊಳಿಸಿದರು.

ಪುಸ್ತಕ ವಿಮರ್ಶೆ ಮಾಡಿದ ಹಿರಿಯ ಸಾಹಿತಿ ಶ್ರೀ ಮನೋಹರ್ ತೋನ್ಸೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುವ೦ತಹ ಅನೇಕ ವಿಷಯಗಳು ಈ ಕೃತಿಯಲ್ಲಿ ಅಡಗಿದೆ. ಮಾತ್ರವಲ್ಲ ವಿದ್ಯಾರ್ಥಿಗಳ ಅಧ್ಯಯನ ಮತ್ತು ಪರೀಕ್ಷೆಯನ್ನು ಎದುರಿಸಲು ಪ್ರಯೋಜನವಾಗುವ೦ತಹ ಸುಮಾರು 25 ಕ್ಕಿ೦ತಲೂ ಅಧಿಕ ಪುಟಗಳು ಈ ಕೃತಿಯಲ್ಲಿವೆ. ಶಾಲಾ ವಿದ್ಯಾರ್ಥಿಗಳಲ್ಲಿ ಮೈಗೂಡಿಸಿಕೊಳ್ಳಬೇಕಾದ ಮಾನವೀಯತೆ ಮತ್ತು ನೈತಿಕತೆಯ ಹಿತದೃಷ್ಟಿಯಲ್ಲಿ ಈ ಕೃತಿಯನ್ನು ತಯಾರಿಸಲಾಗಿದೆ. ಇದರ ಪ್ರಯೋಜನವನ್ನು ಮಕ್ಕಳು ಮತ್ತು ಅವರ ಪೋಷಕರೂ ಸದುಪಯೋಗಪಡಿಸಿಕೊಳ್ಳಬೇಕು ಎ೦ದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News