ಅಕ್ರಮವಾಗಿ ಕಡಲೆಕಾಯಿ ಪಡೆದ ಪೇದೆ ಅಮಾನತು
Update: 2017-11-15 18:08 IST
ಬೆಂಗಳೂರು, ನ.15: ವ್ಯಾಪಾರಿಗಳಿಂದ ಅಕ್ರಮವಾಗಿ ಕಡಲೆಕಾಯಿ ಪಡೆದ ಆರೋಪದಡಿ ಪೊಲೀಸ್ ಎಸ್.ಪಿ.ಮಂಡಕ್ಕಿ ಅವರನ್ನು ನಗರದ ಉತ್ತರ ವಿಭಾಗದ ಡಿಸಿಪಿ ಬಿ.ಜಿ.ತಿಮ್ಮಣ್ಣನವರ್ ಅಮಾನತುಗೊಳಿಸಿದ್ದಾರೆ.
ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿ ಭದ್ರತೆ ಒದಗಿಸಲು ಎಸ್.ಪಿ.ಮಂಡಕ್ಕಿ ಅವರನ್ನು ನಿಯೋಜಿಸಲಾಗಿತ್ತು. ಅವರು ವ್ಯಾಪಾರಿಗಳನ್ನು ಬೆದರಿಸಿ ಕಡಲೆಕಾಯಿ ಪಡೆಯುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ವೀಡಿಯೊ ಆಧರಿಸಿ ಅವರ ವಿರುದ್ಧ ಡಿಸಿಪಿ ಕ್ರಮಕೈಗೊಂಡಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.