×
Ad

ಟ್ರೇಡ್ ಪರವಾನಿಗೆ ಅವ್ಯವಹಾರ: ತನಿಖೆಗೆ ಒತ್ತಾಯ

Update: 2017-11-15 18:09 IST

ಬೆಂಗಳೂರು, ನ.15: ಸೊಳ್ಳೆ ನಿಯಂತ್ರಣ ಔಷಧಿ ಸೋಯಿಂಗ್ ಯಂತ್ರಗಳ ಖರೀದಿ ಮತ್ತು ಟ್ರೇಡ್ ಪರವಾನಿಗೆ ಅವ್ಯವಹಾರಗಳನ್ನು ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ವಿಮೋಚನವಾದ) ಕಾರ್ಯಕರ್ತರು ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿ ತಮಟೆ ಚಳವಳಿ ನಡೆಸಿದರು.

ಸೊಳ್ಳೆ ನಿಯಂತ್ರಣ ಮಾಡುತ್ತಿದ್ದ ಪರಿಶಿಷ್ಟ ಜಾತಿ ಪೌರ ಕಾರ್ಮಿಕ ಅವಲಂಭಿತ 50 ಮಂದಿ ಗುತ್ತಿಗೆ ಸೊಳ್ಳೆ ನಿಯಂತ್ರಣ ಕೆಲಸಗಾರರನ್ನು ಬೀದಿಪಾಲು ಮಾಡಿರುವ ಬೊಮ್ಮನಹಳ್ಳಿ ವಲಯದ ಆರೋಗ್ಯ ಅಧಿಕಾರಿ ಡಾ. ಸವಿತ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಧರಣಿನಿರತರರು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಸಮಿತಿ ಸಂಸ್ಥಾಪಕ ಅಧ್ಯಕ್ಷ ಆರ್.ಗುರುಮೂರ್ತಿ, ಆರೋಗ್ಯ ಅಧಿಕಾರಿಗಳು ಇವರಿಗೆ ಕೈಗೊಂಡ ನಿರ್ಧಾರಗಳನ್ನು ತನಿಖೆಗೆ ವಹಿಸಬೇಕು. ಸೊಳ್ಳೆ ನಿಯಂತ್ರಿಸುತ್ತಿದ್ದ ಪೌರ ಕಾರ್ಮಿಕರನ್ನು ಅದೇ ಸೇವೆಯಲ್ಲಿ ಮುಂದುವರೆಸಬೇಕು. ಆರೋಗ್ಯಾಧಿಕಾರಿಗಳು ಈವರೆಗೆ ಕೈಗೊಂಡ ನಿರ್ಧಾರಗಳನ್ನು ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News