ಮುಹಮ್ಮದ್ ಹಫೀಝ್ ಬೌಲಿಂಗ್‌ಗೆ ಐಸಿಸಿ ನಿಷೇಧ

Update: 2017-11-16 18:30 GMT

ಕರಾಚಿ, ನ.16: ಪಾಕಿಸ್ತಾನದ ಆಫ್-ಸ್ಪಿನ್ನರ್ ಮುಹಮ್ಮದ್ ಹಫೀಝ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ನಿಷೇಧ ಹೇರಿದೆ. ಹಫೀಝ್ ಬೌಲಿಂಗ್ ಶೈಲಿ ನಿಯಮಬದ್ಧವಾಗಿಲ್ಲ ಎಂದು ಐಸಿಸಿ ಗುರುವಾರ ತಿಳಿಸಿದೆ. ಕಳೆದ ತಿಂಗಳು ನಡೆದಿದ್ದ ಶ್ರೀಲಂಕಾ ವಿರುದ್ಧದ ಮೂರನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ವೇಳೆ ಪಂದ್ಯದ ಅಧಿಕಾರಿಗಳು ಹಫೀಝ್ ಬೌಲಿಂಗ್ ಶೈಲಿಯ ವಿರುದ್ಧ ವರದಿ ಸಲ್ಲಿಸಿದ್ದರು.

‘‘ಹಫೀಝ್ ಬೌಲಿಂಗ್ ವೇಳೆ ತಾನು ನಿಗದಿಪಡಿಸಿರುವ ಮಾನದಂಡ(15 ಡಿಗ್ರಿ)ಕ್ಕಿಂತ ಹೆಚ್ಚು ಕೈಯನ್ನು ಬಾಗಿಸುತ್ತಾರೆ’’ ಎಂದು ಐಸಿಸಿ ತಿಳಿಸಿದೆ.

37ರ ಹರೆಯದ ಹಫೀಝ್ ಸಂಶಯಾಸ್ಪದ ಬೌಲಿಂಗ್ ಆರೋಪದಲ್ಲಿ ಈ ಹಿಂದೆ ಎರಡು ಬಾರಿ ಅಮಾನತುಗೊಂಡಿದ್ದರು. 2015ರ ಜುಲೈ 15 ರಿಂದ ಎರಡು ತಿಂಗಳ ಕಾಲ ನಿಷೇಧವನ್ನು ಎದುರಿಸಿದ್ದರು. ಎರಡು ವರ್ಷಗಳಲ್ಲಿ ಎರಡನೆ ಬಾರಿ ಐಸಿಸಿ ಹಫೀಝ್ ಬೌಲಿಂಗ್ ಶೈಲಿ ಸರಿಯಿಲ್ಲ ಎಂದು ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News