ರಾಷ್ಟ್ರ ಗೀತೆ ಹಾಡುವಾಗ ಚೂಯಿಂಗ್ ಗಮ್ ಜಗಿಯುತ್ತಿದ್ದ ಕೊಹ್ಲಿ !

Update: 2017-11-17 09:28 GMT

ಕೋಲ್ಕತಾ, ನ.17: ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಗುರುವಾರ ಶ್ರೀಲಂಕಾ ವಿರುದ್ಧ ಮೊದಲ ಕ್ರಿಕೆಟ್ ಟೆಸ್ಟ್ ಆರಂಭಕ್ಕೂ ಮುನ್ನ ರಾಷ್ಟ್ರ ಗೀತೆ ಹಾಡುವಾಗ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಚೂಯಿಂಗ್ ಗಮ್ ಜಗಿಯುತ್ತಿದ್ದ ವಿಚಾರ ವಿವಾದವನ್ನುಂಟು ಮಾಡಿದೆ.

ಉಭಯ ತಂಡಗಳ ಸದಸ್ಯರು ರಾಷ್ಟ್ರ ಗೀತೆಗೆ ಗೌರವ ಸೂಚಿಸಿ ಒಂದೇ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಕೊಹ್ಲಿ ಚೂಯಿಂಗ್  ಗಮ್ ಜಗಿಯುತ್ತಿರುವುದು ಕಂಡು ಬಂದಿದೆ.

ಕಳೆದ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಟ್ವೆಂಟಿ  -20 ಕ್ರಿಕೆಟ್ ವೇಳೆ ಭಾರತದ ಯುವ ಬೌಲರ್ ಫರ್ವೆಝ್ ರಸೂಲ್ ಇದೇ ರೀತಿ ರಾಷ್ಟ್ರ ಗೀತೆ ಹಾಡುವ ವೇಳೆ ಚೂಯಿಂಗ್ ಗಮ್ ಜಗಿದು ವಿವಾದವನ್ನುಂಟು ಮಾಡಿದ್ದರು. ಇದೀಗ ವಿರಾಟ್ ಕೊಹ್ಲಿ  ವಿವಾದದಲ್ಲಿ  ಸಿಲುಕಿಕೊಂಡಿದ್ದಾರೆ.

ನಾಯಕನಾಗಿ ತಂಡದ ಜವಾಬ್ದಾರಿ ಹೊತ್ತುಕೊಂಡಿರುವ ಕೊಹ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿಸಿದ್ದಾರೆ. ಫರ್ವೆಝ್ ರಸೂಲ್ ಸಾಮಾನ್ಯ ಆಟಗಾರ. ಆದರೆ ಕೊಹ್ಲಿ ನಾಯಕನಾಗಿರುವ ಹಿನ್ನೆಲೆಯಲ್ಲಿ  ಅವರ  ವಿರುದ್ಧದ ಆರೋಪ ಗಂಭೀರವಾಗಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News