ಶಶಿಕಲಾ ಪತಿ ನಟರಾಜನ್‌ಗೆ 2 ವರ್ಷ ಜೈಲು: ಕೆಳ ನ್ಯಾಯಾಲಯದ ತೀರ್ಪು ಎತ್ತಿಹಿಡಿದ ಹೈಕೋರ್ಟ್

Update: 2017-11-17 17:37 GMT

ಚೆನ್ನೈ, ನ. 17: ಎಐಎಡಿಎಂಕೆಯ ಉಚ್ಛಾಟಿತ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಪತಿ ಎಂ. ನಟರಾಜನ್‌ಗೆ 2010ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಎರಡು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ನೀಡಿದ ತೀರ್ಪನ್ನು ಮದ್ರಾಸ್ ಉಚ್ಚ ನ್ಯಾಯಾಲಯ ಶುಕ್ರವಾರ ಎತ್ತಿಹಿಡಿದಿದೆ.

 ವಿದೇಶಿ ಲೆಕ್ಸಸ್ ಕಾರು ಅಕ್ರಮ ಖರೀದಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ನಟರಾಜನ್ ಹಾಗೂ ಇತರ ಮೂವರ ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಜಿ. ಜಯಚಂದ್ರನ್ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದ್ದಾರೆ.

 1994ರಲ್ಲಿ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಮ್ಯಾನೇಜರ್ ಸುಂದರ್ ರಾಜನ್ ಹಾಗೂ ಯೋಗೇಶ್ ಬಾಲಕೃಷ್ಣನ್ ಅವರ ನೆರವಿನಿಂದ ನಟರಾಜನ್ ಹಾಗೂ ಬಾಸ್ಕರನ್ ಇಂಗ್ಲೆಂಡ್‌ನಿಂದ ವಿದೇಶಿ ಹೊಸ ಕಾರು ಲೆಕ್ಸಸ್ ಅನ್ನು ಆಮದು ಮಾಡಿಕೊಂಡಿದ್ದರು. ಇದು 1993ರಲ್ಲಿ ಖರೀದಿಸಿದ ಸೆಕೆಂಡ್ ಹ್ಯಾಂಡ್ ಕಾರು ಎಂದು ಹೇಳುವ ಮೂಲಕ ಈ ನಾಲ್ವರು ತೆರಿಗೆ ತಪ್ಪಿಸಿದ್ದರು ಎಂದು ಪ್ರಾಸಿಕ್ಯೂಷನ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News