ಟೆಸ್ಟ್ ನ ಎರಡನೇ ದಿನವೂ ಮಳೆಯದ್ದೇ ಆಟ

Update: 2017-11-17 18:37 GMT

ಕೋಲ್ಕತಾ,ನ.17: ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಮೊದಲ ಟೆಸ್ಟ್‌ನ ಎರಡನೇ ದಿನದ ಆಟವೂ ಮಳೆಗಾಹುತಿಯಾಗಿದೆ.

ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ಮಳೆಯಿಂದಾಗಿ ಆಟ ನಿಂತಾಗ ಭಾರತ ಮೊದಲ ಇನಿಂಗ್ಸ್‌ನಲ್ಲಿ 32.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 74 ರನ್ ಗಳಿಸಿದೆ.

ಚೇತೇಶ್ವರ ಪೂಜಾರ ಔಟಾಗದೆ 47 ರನ್(102ಎ, 9ಬೌ) ಮತ್ತು ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಔಟಾಗದೆ 6 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಮೊದಲ ದಿನದಾಟದಂತ್ಯಕ್ಕೆ 11.5 ಓವರ್‌ಗಳಲ್ಲಿ 17 ರನ್ ಗಳಿಸಿದ್ದ ಭಾರತ ಆಟ ಮುಂದುವರಿಸಿ ಈ ಮೊತ್ತಕ್ಕೆ 21 ಓವರ್‌ಗಳಲ್ಲಿ 57 ರನ್ ಜಮೆ ಮಾಡಿತು. ಆದರೆ ಮತ್ತೆ ಎರಡು ವಿಕೆಟ್‌ಗಳನ್ನು ಪತನಗೊಂಡಿದೆ.

ಭಾರತದ ಬ್ಯಾಟಿಂಗ್ ಮತ್ತೆ ಸೊರಗಿದೆ. 50ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಪೂಜಾರ ರಕ್ಷಣೆ ನೀಡಿದ್ದಾರೆ. ಮಳೆಯಿಂದಾಗಿ ಬ್ಯಾಟಿಂಗ್ ಕಠಿಣವಾಗಿದ್ದರೂ, ಪೂಜಾರ ಏಕಾಂಗಿ ಹೋರಾಟ ಮೂಲಕ ತಂಡದ ಖಾತೆಗೆ ರನ್ ಜಮೆ ಮಾಡಿದ್ದಾರೆ.

ಗುರುವಾರ ಮಳೆಯಿಂದ ಆಟ ನಿಂತಾಗ ಔಟಾಗದೆ ಕ್ರೀಸ್‌ನಲ್ಲಿದ್ದ ಚೇತೇಶ್ವರ ಪೂಜಾರ ಇಂದು ಬ್ಯಾಟಿಂಗ್ ಮುಂದುವರಿಸಿ ಶ್ರೀಲಂಕಾದ ದಾಳಿಯನ್ನು ಸಮರ್ಥವಾಗಿ ಎದುರಿಸಿ ಅರ್ಧಶತಕ ದಾಖಲಿಸುವ ಕಡೆಗೆ ಹೆಜ್ಜೆ ಇರಿಸಿದ್ದಾರೆ. ಆದರೆ ಅವರೊಂದಿಗೆ ಬ್ಯಾಟಿಂಗ್ ಮುಂದುವರಿಸಿದ್ದ ಅಜಿಂಕ್ಯ ರಹಾನೆ 4 ರನ್ ಗಳಿಸಿ ಔಟಾಗಿದ್ದಾರೆ. ರವಿಚಂದ್ರನ್ ಅಶ್ವಿನ್ 4 ರನ್‌ಗಳ ಕಾಣಿಕೆ ನೀಡಿ ಔಟಾಗಿದ್ದಾರೆ.

ಇಂದು ಪತನಗೊಂಡ ಎರಡು ವಿಕೆಟ್‌ಗಳು ದಾಸನ್ ಶನಕ ಪಾಲಾಗಿದೆ. ಮೊದಲ ದಿನ ಮೂರು ವಿಕೆಟ್‌ಗಳನ್ನು ಸುರಂಗ ಲಕ್ಮಲ್ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News