ಪ್ರಥಮ ಟೆಸ್ಟ್: ಭಾರತ 172 ರನ್‌ಗೆ ಆಲೌಟ್

Update: 2017-11-18 06:13 GMT

ಕೋಲ್ಕತಾ, ನ.18: ಮಳೆಬಾಧಿತ ಮೊದಲ ಟೆಸ್ಟ್‌ನ ಮೂರನೆ ದಿನವಾದ ಶನಿವಾರ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 172 ರನ್ ಗಳಿಸಿ ಆಲೌಟಾಗಿದೆ.

 5 ವಿಕೆಟ್‌ಗಳ ನಷ್ಟಕ್ಕೆ 74 ರನ್‌ನಿಂದ ಮೂರನೆ ದಿನದಾಟ ಮುಂದುವರಿಸಿದ ಭಾರತ ಪೂಜಾರ(52 ರನ್, 117 ಎಸೆತ, 10 ಬೌಂಡರಿ), ವೃದ್ದಿಮಾನ್ ಸಹಾ(29), ರವೀಂದ್ರ ಜಡೇಜ(22) ಹಾಗೂ ಮುಹಮ್ಮದ್ ಶಮಿ(24) ಪ್ರಯತ್ನದ ಹೊರತಾಗಿಯೂ 172 ರನ್‌ಗೆ ಆಲೌಟಾಯಿತು.

ಶ್ರೀಲಂಕಾದ ಪರ ವೇಗದ ಬೌಲರ್ ಸುರಂಗ ಲಕ್ಮಲ್(4-20) ಯಶಸ್ವಿ ಬೌಲರ್ ಎನಿಸಿಕೊಂಡರು. ಲಹಿರು ಗಾಮಗೆ(2-59), ಶನಕ(2-36) ಹಾಗೂ ದಿಲ್‌ರುವಾನ್ ಪೆರೇರ(2-19) ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News