ಬಲೂಚಿಸ್ತಾನ: ಪ್ರತ್ಯೇಕವಾದಿ ಗುಂಪಿನ ಕಮಾಂಡರ್ ಹತ್ಯೆ

Update: 2017-11-18 16:55 GMT

ಕ್ವೆಟ್ಟಾ,ನ.18: ನೈಋತ್ಯ ಬಲೂಚಿಸ್ತಾನದಲ್ಲಿ ಈ ವಾರದ ಆರಂಭದಲ್ಲಿ ನಡೆದ 15 ಮಂದಿಯ ಹತ್ಯಾಕಾಂಡದಲ್ಲಿ ಶಾಮೀಲಾಗಿದ್ದನೆನ್ನಲಾದ ಬಲೂಚಿಸ್ತಾನದ ಪ್ರತ್ಯೇಕವಾದಿ ಗುಂಪಿನ ಕಮಾಂಡರ್ ಒಬ್ಬನನ್ನು ಭದ್ರತಾ ಪಡೆಗಳು ಹತ್ಯೆಗೈದಿರುವುದಾಗಿ ಪಾಕ್ ಸೇನೆ ಶನಿವಾರ ತಿಳಿಸಿದೆ.

 ಹತ್ಯೆಯಾದ ಉಗ್ರಗಾಮಿ ಕಮಾಂಡರ್‌ನನ್ನು ಬಲೂಚಿಸ್ತಾನ ವಿಮೋಚನಾ ರಂಗದ ನಾಯಕ ಯೂನುಸ್ ತೌಕಾಲಿ ಎಂದು ಗುರುತಿಸಲಾಗಿದೆ. ಬುಧವಾರ ಟರ್ಬಾಟ್ ಜಿಲ್ಲೆಯಲ್ಲಿ ನಡೆದ 15 ಮಂದಿಯ ಹತ್ಯಾಕಾಂಡದ ಹೊಣೆಯನ್ನು ತೌಕಾಲಿಯ ಗುಂಪು ವಹಿಸಿಕೊಂಡಿತ್ತು. ತಾವು ಹತ್ಯೆಗೈದ ವ್ಯಕ್ತಿಗಳು ಪಾಕ್‌ಸೇನೆಯ ರಸ್ತೆ ನಿರ್ಮಾಣ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದವರೆಂದು ಅದು ಹೇಳಿಕೊಂಡಿತ್ತು.

ಬಲೂಚಿಸ್ತಾನದ ಟರ್ಬಾಟ್ ಜಿಲ್ಲೆಯಲ್ಲಿ ಬುಧವಾರ ಹದಿನೆದು ಮಂದಿ ಹತ್ಯಾಕಾಂಡ ನಡೆದ ಸ್ಥಳದ ಸಮೀಪದಲ್ಲೇ ಭದ್ರತಾಪಡೆಗಳು ದಾಳಿ ನಡೆಸಿ ಪ್ರತ್ಯೇಕವಾದಿ ಗುಂಪಿನ ಕಮಾಂಡರ್‌ನನ್ನು ಹತ್ಯೆಗೈದಿವೆಯೆಂದು ಅವು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News