ಪುಣೆ ಚಾಲೆಂಜರ್: ಭಾಂಬ್ರಿ ಚಾಂಪಿಯನ್

Update: 2017-11-18 18:14 GMT

ಹೊಸದಿಲ್ಲಿ, ನ.18: ಚೆನ್ನೈ ಆಟಗಾರ ರಾಮ್‌ಕುಮಾರ್ ರಾಮನಾಥನ್‌ರನ್ನು ಸೋಲಿಸಿರುವ ದಿಲ್ಲಿಯ ಯೂಕಿ ಭಾಂಬ್ರಿ ಎಟಿಪಿ ಪುಣೆ ಚಾಲೆಂಜರ್ ಟೂರ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಬಾಲೆವಾಡಿ ಕ್ರೀಡಾ ಸಂಕೀರ್ಣದಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ದೇಶದ ಅಗ್ರ ಸಿಂಗಲ್ಸ್ ಆಟಗಾರ ಭಾಂಬ್ರಿ ಸಹ ಆಟಗಾರ ರಾಮನಾಥನ್‌ರನ್ನು 4-6,6-3, 6-4 ಸೆಟ್‌ಗಳಿಂದ ಮಣಿಸಿದರು. ಯೂಕಿ 2015ರಲ್ಲಿ ಕೊನೆಯ ಬಾರಿ ಪುಣೆಯಲ್ಲಿ ಚಾಲೆಂಜರ್ ಟ್ರೋಫಿ ಜಯಿಸಿದ್ದರು. ಚಾಲೆಂಜರ್ ಮಟ್ಟದಲ್ಲಿ 6ನೆ ಪ್ರಶಸ್ತಿ ಜಯಿಸಿದರು. ಬೆಂಗಳೂರು ಓಪನ್‌ನಲ್ಲಿ ಭಾಗವಹಿಸಲಿರುವ ಭಾಂಬ್ರಿ ಮೊದಲ ಸುತ್ತಿನಲ್ಲಿ ಬಾಲಾಜಿಯವರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News