ದೀಪಿಕಾರನ್ನು ಜೀವಂತ ಸುಟ್ಟವರಿಗೆ 1 ಕೋಟಿ ರೂ. ಬಹುಮಾನ: ಕ್ಷತ್ರಿಯ ಮಹಾಸಭಾ ಘೋಷಣೆ

Update: 2017-11-20 11:26 GMT

ಹೊಸದಿಲ್ಲಿ, ನ.20: ‘ಪದ್ಮಾವತಿ’ ಚಿತ್ರ ಬಿಡುಗಡೆಗೂ ಮುನ್ನ ವಿವಾದಗಳಿಂದಲೇ ಸುದ್ದಿಯಾಗಿದೆ. ನಿನ್ನೆಯಷ್ಟೇ ಬಿಜೆಪಿ ನಾಯಕರೊಬ್ಬರು ಭನ್ಸಾಲಿ ಹಾಗು ದೀಪಿಕಾ ತಲೆಗೆ 10 ಕೋಟಿ ರೂ. ಬಹುಮಾನ ಘೋಷಿಸಿ ವಿವಾದ ಸೃಷ್ಟಿಸಿದ್ದರು. ಈ ನಡುವೆ ಅಖಿಲ ಭಾರತೀಯ ಕ್ಷತ್ರಿಯ ಮಹಾಸಭಾ ದೀಪಿಕಾ ಪಡುಕೋಣೆಯನ್ನು ಜೀವಂತ ಸುಡುವವರಿಗೆ 1 ಕೋಟಿ ರೂ. ಬಹುಮಾನ ಘೋಷಿಸಿದೆ.

ಚಿತ್ರದಲ್ಲಿ ರಾಣಿ ಪದ್ಮಾವತಿಯ ಪಾತ್ರವನ್ನು ನಿರ್ವಹಿಸಿರುವ ದೀಪಿಕಾ ಪಡುಕೋಣೆಯ ನೂರಾರು ಪ್ರತಿಕೃತಿಗಳನ್ನು ಅಖಿಲ ಭಾರತೀಯ ಕ್ಷತ್ರಿಯ ಮಹಾಸಭಾದ ಸದಸ್ಯರು ದಹಿಸಿದರು.

“ಜೀವಂತವಾಗಿ ಸುಟ್ಟಾಗ ಹೇಗನಿಸುತ್ತದೆ ಎನ್ನುವುದು ದೀಪಿಕಾಗೆ ತಿಳಿಯಬೇಕು. ರಾಣಿಯ ತ್ಯಾಗದ ಬಗ್ಗೆ ನಟಿಗೆ ತಿಳಿದಿಲ್ಲ. ದೀಪಿಕಾರನ್ನು ಜೀವಂತ ಸುಡುವವರಿಗೆ 1 ಕೋಟಿ ರೂ. ಬಹುಮಾನ ನೀಡಲಾಗುವುದು” ಎಂದು ಕ್ಷತ್ರಿಯ ಮಹಾಸಭಾದ ಯೂತ್ ವಿಂಗ್ ನಾಯಕ ಭುವನೇಶ್ವರ್ ಸಿಂಗ್ ಎಂಬಾತ ಈ ಸಂದರ್ಭ ಹೇಳಿರುವುದು ವಿವಾದ ಸೃಷ್ಟಿಸಿದೆ. ಈ ಬಗ್ಗೆ ವರದಿಯನ್ನು ಕೋರಿದ್ದೇವೆ ಎಂದು ಎಸ್ಪಿ ರೋಹಿತ್ ಸಿಂಗ್ ಸಹಜವಾನ್ ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News