ತೆರಿಗೆ ವಂಚಿಸುವ ಖೊಟ್ಟಿ ಕಂಪೆನಿಗಳ ಹೊಸ ರಾಜಧಾನಿಯಾಗಿ ಸೂರತ್

Update: 2017-11-21 03:59 GMT

ಆದಾಯ ತೆರಿಗೆ ಇಲಾಖೆಯ ಪ್ರಕಾರ, ಸರಕಾರ ಒದಗಿಸಿರುವ ಶೆಲ್ (ಖೊಟ್ಟಿ) ಕಂಪೆನಿಗಳು ಫರ್ಮ್‌ಗಳ ಹೊಸಯಾದಿಯಲ್ಲಿ ಬಹುಸಂಖ್ಯಾತ ಕಂಪೆನಿಗಳು ಸೂರತ್‌ನಲ್ಲಿವೆ. ಮೊದಲು ಈ ಯಾದಿಯಲ್ಲಿ ಕೋಲ್ಕತಾ ಮೊದಲ ಸ್ಥಾನದಲ್ಲಿತ್ತು.

ನೋಟು ರದ್ಧತಿಯ ಬಳಿಕ ಅಂತಹ ಕಂಪೆನಿಗಳ ಹೆಚ್ಚು ಹೆಚ್ಚು ವಿವರಗಳು ಬೆಳಕಿಗೆ ಬಂದಾಗ ಈ ವರ್ಷದ ಹಾದಿಯಲ್ಲಿ ತೆರಿಗೆ ಇಲಾಖೆಯು ಅಂತಹ ಇಲಾಖೆಯ ಗುತ್ತಿಗೆಯ ಸುತ್ತ ಕುಣಿಕೆಯನ್ನು ಬಿಗಿಗೊಳಿಸಲಾರಂಭಿಸಿತು. ನೋಟು ರದ್ಧತಿಯ ಅವಧಿಯಲ್ಲಿ ಕನಿಷ್ಠ 5,000 ಕೋಟಿ ರೂಪಾಯಿಯಷ್ಟು ಮೊತ್ತದ ಲೆಕ್ಕವಿಡದ ನಗದನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿದ್ದ 2,138 ಶೆಲ್ ಕಂಪೆನಿಗಳಲ್ಲಿ 80ರಷ್ಟು ಕಂಪೆನಿಗಳು ಸೂರತ್‌ನಲ್ಲಿ ಕಾರ್ಯಾಚರಿಸುವ ಕಂಪೆನಿಗಳೆಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಕಂಪೆನಿಗಳ ಹೊಸ ಯಾದಿಯಿಂದ ತಿಳಿದುಬಂತು. ಈ ಸಂಖ್ಯೆ ಇನ್ನಷ್ಟು ಹೆಚ್ಚಬಹುದೆಂದು ಇಲಾಖೆ ನಿರೀಕ್ಷಿಸುತ್ತ್ತಿದೆ.

ಸರಕಾರದ ವಿತ್ತ ಸಚಿವಾಲಯವು ಪಟ್ಟಿಮಾಡಿದ ಯಾದಿಯಲ್ಲಿ 5,800 ಕಂಪೆನಿಗಳಿದ್ದವು. ನೋಟು ರದ್ಧತಿಯ ಬಳಿಕ, ಝೀರೊ-ಬ್ಯಾಲನ್ಸ್ ಠೇವಣಿ ಇದ್ದ ಖಾತೆಗಳಲ್ಲಿ ಈ ಕಂಪೆನಿಗಳ 17,000 ಕೋಟಿ ರೂಪಾಯಿ ಠೇವಣಿ ಜಮಾ ಮಾಡಲಾಯಿತು. ಆ ಬಳಿಕ ಸುಮಾರಾಗಿ ಇಷ್ಟೇ ಮೊತ್ತದ ಹಣವನ್ನು ಖಾತೆಗಳಿಂದ ವಿದ್‌ಡ್ರಾಮಾಡಲಾಯಿತು. ಆ ಮೊದಲು, 2011 ಮತ್ತು 2015ರ ನಡುವೆ, ಹಣ ಅಕ್ರಮ ವರ್ಗಾವಣೆ ಮಾಡಲು 16,000 ಶೆಲ್ ಕಂಪೆನಿಗಳು ಕೋಲ್ಕತಾದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದವೆಂಬುದನ್ನು ತೆರಿಗೆ ಇಲಾಖೆ ಪತ್ತೆಹಚ್ಚಿತ್ತು.

ಹೊಸ ಕಾರ್ಯ ವಿಧಾನಗಳು, ಹೊಸ ತಂತ್ರಗಳು

ಎರಡು ಮುಖ್ಯ ಕಾರಣಗಳಿಂದಾಗಿ ಶೆಲ್ ಕಂಪೆನಿಗಳಿಗೆ ಕೊಲ್ಕತಾಗಿಂತ ಸೂರತ್ ಹೆಚ್ಚು ಸುರಕ್ಷಿತ ತಾಣವಾಗಿತ್ತೆಂಬುದು ತೆರಿಗೆ ಇಲಾಖೆ ನಡೆಸಿದ ವಿಚಾರಣೆಯಿಂದ ತಿಳಿದುಬಂತು. ಮೊದಲನೆಯದಾಗಿ, ಸೂರತ್‌ನ ವಜ್ರ ವ್ಯಾಪಾರವು ಸಮಾನಾಂತರವಾದ ಒಂದು ವ್ಯಾಪಾರಕ್ಕೆ ಅನುವುಮಾಡಿಕೊಟ್ಟಿತ್ತು: ವಜ್ರ ವ್ಯಾಪಾರಿಗಳು, ಮಿಲಿಯಗಟ್ಟಲೆ ಡಾಲರ್ ಬೆಲೆಬಾಳುವ ವಜ್ರಗಳನ್ನು ಅಕ್ರಮವಾಗಿ ವಿದೇಶಗಳಿಗೆ ಸಾಗಿಸುತ್ತಿದ್ದರು. ಹೆಚ್ಚಾಗಿ ದುಬೈ ಮತ್ತು ದಕ್ಷಿಣ ಏಶ್ಯಾದ ದೇಶಗಳಿಗೆ ಸಾಗಿಸಲಾಗುತ್ತಿದ್ದ ಈ ವಜ್ರಗಳು ಅಲ್ಲಿಂದ ಪಾಶ್ಚಿಮಾತ್ಯ ಮಾರುಕಟ್ಟೆಗಳಲ್ಲಿ ಬಿಕರಿಯಾಗುತ್ತಿದ್ದವು.

 ವಿದೇಶೀ ಮಾರುಕಟ್ಟೆಗಳೊಂದಿಗೆ ಸೂರತ್‌ಗೆ ಪರೋಕ್ಷ ರಹದಾರಿ ಗಳಿರುವುದು ಎರಡನೆಯ ಕಾರಣ. ಈ ರಹದಾರಿಯು ತುಂಬ ಸಂಕೀರ್ಣ ಮತ್ತು ಪತ್ತೆಹಚ್ಚಲು ಸುಲಭಸಾಧ್ಯವಲ್ಲ. ‘‘ಸೂರತ್ ತುಂಬ ಸಂಕೀರ್ಣವಾದ ಹಣಕಾಸು ಚೌಕಟ್ಟುಗಳಿಗೆ ಪ್ರಸಿದ್ಧವಾಗಿದೆ. ಅಲ್ಲಿ ವೃತ್ತಿಪರ ಸೇವಾ ಕಂಪೆನಿ(ಫರ್ಮ್)ಗಳಿಗೆ, ಲೆಕ್ಕ ಪರಿಶೋಧಕರಿದ್ದಾರೆ, ಹಾಗೂ ವಕೀಲರಿದ್ದಾರೆ. ಇವರೆಲ್ಲ ವಿದೇಶಗಳಲ್ಲೂ ಭಾರತದಲ್ಲೂ ಕಚೇರಿಗಳನ್ನು ಹೊಂದಿದ್ದಾರೆ; ಹಾಗಾಗಿ ಇವರು ಅಂತಹ ಕಂಪೆನಿಗಳಿಗೆ ಅಕ್ರಮ ಹಣ ಸಾಗಿಸಲು ನೆರವು ನೀಡುತ್ತಾರೆ’’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಓರ್ವ ತೆರಿಗೆ ಸಮಾಲೋಚಕರು ಹೇಳಿದ್ದಾರೆ.

‘ಲೇಯರಿಂಗ್’ ಎಂದು ಕರೆಯಲಾಗುವ ಅಂತಹ ಒಂದು ಸ್ಕೀಮ್‌ನಲ್ಲಿ, ಹಲವಾರು ವ್ಯವಹಾರಗಳ ಮೂಲಕ ಅಕ್ರಮವಾಗಿ ಹಣ ರವಾನೆ ಯಾಗುತ್ತದೆ. ಈ ವ್ಯವಹಾರಗಳು ಹಲವು ಪದರಗಳಲ್ಲಿ ನಡೆಯುವುದರಿಂದ ಹಣದ ಜಾಡನ್ನು ಜಾಲವನ್ನು, ಹಾದಿಯನ್ನು ಪತ್ತೆ ಹಚ್ಚುವುದು ಕಷ್ಟವಾಗು ತ್ತದೆಂದು ಆ ಅಧಿಕಾರಿ ಹೇಳಿದ್ದಾರೆ.

  ಶೆಲ್ ಕಂಪೆನಿಗಳ ವ್ಯವಹಾರಗಳಲ್ಲಿ ಆಸ್ತಿಗಳು ಫಲಾನುಭವಿಗಳ ಹೆಸರಿನಲ್ಲಿರುವುದು ತೀರಾ ಅಪರೂಪ. ಮತ್ತು ಯಾವ ಕಾರ್ಯಕ್ಷೇತ್ರಗಳಲ್ಲಿ ಭಾರತದ ಕಾನೂನು ನಡೆಯುವುದಿಲ್ಲವೋ, ಅಲ್ಲಿಗೆ ಹಣ ವರ್ಗಾವಣೆ ಯಾಗುತ್ತದೆ. ವ್ಯಾಪಾರಿಗಳು ಸೂರತ್‌ನಲ್ಲಿ ನೆಲೆ ಹೊಂದಿರುವ ಕಂಪೆನಿಗಳ ಬ್ಯಾಂಕ್ ಖಾತೆಗಳೊಂದಿಗೆ ಕೊಂಡಿ ಇರುವ ವಿದೇಶಿ ಬ್ಯಾಂಕ್ ಖಾತೆಗಳಲ್ಲಿ ಹಣ ಇಟ್ಟಿರುವ ಹಲವಾರು ಪ್ರಮುಖ ಪ್ರಕರಣಗಳು ಬೆಳಕಿಗೆ ಬಂದಿವೆ.

ಕೋಲ್ಕತಾದಲ್ಲಿರುವ ಶೆಲ್ ಕಂಪೆನಿಗಳ ಮೇಲೆ ಆದಾಯ ತೆರಿಗೆ ಇಲಾಖೆಯು ಸತತವಾಗಿ ದಾಳಿ ನಡೆಸಿರುವುದು ಕೂಡ ಆ ಕಂಪೆನಿಗಳು ಕೋಲ್ಕತಾದಿಂದ ಸೂರತ್‌ಗೆ ತಮ್ಮ ನೆಲೆ ಬದಲಾಯಿಸಲು ಇನ್ನೊಂದು ಕಾರಣವಿರಬಹುದು. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಅಂತಹ 331 ಕಂಪೆನಿಗಳನ್ನು ಕಳೆದ ಆಗಸ್ಟ್ ತಿಂಗಳಲ್ಲಿ ಪತ್ತೆ ಹಚ್ಚಿದಾಗ ಅವುಗಳ ವಿರುದ್ಧದ ಕಾರ್ಯಾಚರಣೆ ಚುರುಕುಗೊಂಡಿತು. ಅವುಗಳಲ್ಲಿ ಸುಮಾರು 150 ಕಂಪೆನಿಗಳು ಕೋಲ್ಕತಾದಲ್ಲೇ ಇದ್ದವು. ಕಳೆದ ಮೂರು ವರ್ಷಗಳಲ್ಲಿ 22,000ಕ್ಕಿಂತಲೂ ಹೆಚ್ಚು ಫಲಾನುಭವಿಗಳು ತಮ್ಮ ಅಕ್ರಮಗಳಿಗಾಗಿ ಬಳಸಿಕೊಂಡ 1,155ಕ್ಕಿಂತಲೂ ಹೆಚ್ಚು ಶೆಲ್ ಕಂಪೆನಿಗಳನ್ನು ಆದಾಯ ತೆರಿಗೆ ಇಲಾಖೆಯು ಪತ್ತೆ ಹಚ್ಚಿದೆ. ಸಾಚಾ ಅಲ್ಲದ ಅಂತಹ ವ್ಯವಹಾರಗಳಲ್ಲಿ ಫಲಾನುಭವಿಗಳು 13,300 ಕೋಟಿ ರೂ.ಗಿಂತಲೂ ಹೆಚ್ಚು ಅಕ್ರಮ ವ್ಯವಹಾರ ನಡೆಸಿದ್ದಾರೆ. ಇಷ್ಟರವರೆಗೆ ತೆರಿಗೆ ಇಲಾಖೆಯು ಅವರಲ್ಲಿ 47 ಮಂದಿಯ ವಿರುದ್ಧ ಮಾತ್ರ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿದೆ. ಅಂದರೆ, ಅಕ್ರಮ ಹಣ ರವಾನೆ ಮಾಡುವ ವ್ಯಕ್ತಿಗಳು ಎಷ್ಟೊಂದು ಸುಲಭವಾಗಿ ನಮ್ಮ ದೇಶದ ಕಾನೂನಿನ ಕಣ್ಣು ತಪ್ಪಿಸಿ ಬೃಹತ್ ಮೊತ್ತದ ಹಣವನ್ನು ಕೊಳ್ಳೆ ಹೊಡೆಯಬಲ್ಲರು, ಮತ್ತು ನೋಟು ರದ್ಧತಿಯಿಂದ ತಮಗೆ ಗಣನೀಯ ಪ್ರಮಾಣದ ಯಾವುದೇ ಮೊತ್ತ ನಷ್ಟವಾಗದಂತೆ ವ್ಯವಹರಿಸಬಲ್ಲರೆಂಬುದನ್ನು ಊಹಿಸಿಕೊಳ್ಳಬಹುದು.

ಅದೇ ವೇಳೇ, ಆದಾಯ ತೆರಿಗೆ ಇಲಾಖೆಯು ಕೋಲ್ಕತಾದಲ್ಲಿ ಬೃಹತ್ ಪ್ರಮಾಣದಲ್ಲಿ ಅಕ್ರಮ ದಂಧೆಗಳಲ್ಲಿ ತೊಡಗಿರುವ ಶೆಲ್ ಕಂಪೆನಿಗಳಿಗೆ ನೆರವು ನೀಡಿದ ಲೆಕ್ಕ ಪರಿಶೋಧಕರ ವಿರುದ್ಧ ಕೂಡ ಕಾನೂನು ಕ್ರಮ ತೆಗೆದುಕೊಂಡಿದೆ.

ಕೃಪೆ.scroll.in

Writer - ಶ್ರಿಮಿ ಚೌಧರಿ

contributor

Editor - ಶ್ರಿಮಿ ಚೌಧರಿ

contributor

Similar News