ನಾಲ್ವರು ಬಾಕ್ಸರ್‌ಗಳು ಕ್ವಾರ್ಟರ್ ಫೈನಲ್‌ಗೆ ಲಗ್ಗೆ

Update: 2017-11-21 18:37 GMT

ಗುವಾಹಟಿ, ನ.21: ಎಐಬಿಎ ಮಹಿಳಾ ಯೂತ್ ವಿಶ್ವ ಚಾಂಪಿಯನ್‌ಶಿಪ್‌ನ ಮೊದಲ ದಿನವಾದ ಮಂಗಳವಾರ ಭಾರತದ ನಾಲ್ವರು ಬಾಕ್ಸರ್‌ಗಳು ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಟರ್ಕಿಯ ಅಲುಕ್ ಕಾಗ್ಲಾ ವಿರುದ್ಧ 64 ಕೆಜಿ ತೂಕ ವಿಭಾಗದಲ್ಲಿ ಜಯ ಸಾಧಿಸಿರುವ ಅಂಕುಶಿತಾ ಬೊರೊ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟರು. ಬೊರೊ ಬಾಲ್ಕನ್ ಯೂತ್ ಇಂಟರ್‌ನ್ಯಾಶನಲ್ ಬಾಕ್ಸಿಂಗ್ ಟೂರ್ನಿ ಹಾಗೂ ಇಂಟರ್‌ನ್ಯಾಶನಲ್ ಅಹ್ಮೆಟ್ ಟೂರ್ನಿಯಲ್ಲಿ ಬೆಳ್ಳಿ ಜಯಿಸಿದ್ದರು.

ಶಶಿ ಚೋಪ್ರಾ(57ಕೆಜಿ), ಜ್ಯೋತಿ ಗುಲಿಯ(51ಕೆಜಿ) ಹಾಗೂ ನೀತೂ(48ಕೆಜಿ) ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಉಕ್ರೇನ್‌ನ ಅನಸ್ಟೇಸಿಯಾ ಲಿಸಿನ್‌ಸ್ಕಾರನ್ನು ಮಣಿಸಿರುವ ಜ್ಯೋತಿ ಅಂತಿಮ-8ರ ಹಂತ ತಲುಪಿದರು. ಶಶಿ ಚೋಪ್ರಾ ತೈವಾನ್‌ನ ಲಿನ್ ಲಿ ವೀ-ಯಿ ಅವರನ್ನು ಮಣಿಸಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟರು.

ಹಾಲಿ ನ್ಯಾಶನಲ್ ಚಾಂಪಿಯನ್ ನೀತೂ ಬಲ್ಗೇರಿಯದ ಎಮಿ-ಮರಿ ಟೊಡೊರೊವಾರನ್ನು ಮಣಿಸಿ ಅಂತಿಮ-8ರ ಘಟ್ಟ ತಲುಪಿದ್ದಾರೆ.

 ನೇಹಾ ಯಾದವ್(+81ಕೆಜಿ) ಹಾಗೂ ಅನುಪಮಾ(81ಕೆಜಿ) ಡ್ರಾ ಸಾಧಿಸುವ ಮೂಲಕ ಈಗಾಗಲೇ ಸೆಮಿಫೈನಲ್‌ಗೆ ತಲುಪಿದ್ದು ಪದಕ ದೃಢಪಡಿಸಿದ್ದಾರೆ.

ಟೂರ್ನಿಯಲ್ಲಿ 38 ದೇಶಗಳ 150ಕ್ಕೂ ಬಾಕ್ಸರ್‌ಗಳು ಭಾಗವಹಿಸಿದ್ದು, ಇದೇ ಮೊದಲ ಬಾರಿ ಟೂರ್ನಿಯು ಭಾರತದ ಆತಿಥ್ಯದಲ್ಲಿ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News