ಪೋರ್‌ಬಂದರ್‌ನಲ್ಲಿ ಇಂದಿನಿಂದ ರಾಹುಲ್ ಗಾಂಧಿ ಚುನಾವಣಾ ಪ್ರಚಾರ

Update: 2017-11-24 06:05 GMT

  ಹೊಸದಿಲ್ಲಿ,ನ.24: ಗುಜರಾತ್ ವಿಧಾನಸಭೆಯ ಮೊದಲ ಹಂತದ ಚುನಾವಣೆಯ ಆರಂಭಕ್ಕೆ ಕೇವಲ ಎರಡು ವಾರ ಬಾಕಿ ಉಳಿದಿದ್ದು ಕಾಂಗ್ರೆಸ್‌ನ ಉಪಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಪೋರ್‌ಬಂದರ್‌ನಿಂದ ಎರಡು ದಿನಗಳ ಚುನಾವಣೆ ಪ್ರಚಾರ ಆರಂಭಿಸಿದ್ದಾರೆ.

ರಾಹುಲ್ ಗಾಂಧಿ ಕಳೆದ ಎರಡು ತಿಂಗಳಿಂದ ರಾಜ್ಯಾದ್ಯಂತ ರೋಡ್ ಶೋ ನಡೆಸಿದ್ದು ಆಡಳಿತಾರೂಢ ಬಿಜೆಪಿಯನ್ನು ಗುರಿಯಾಗಿರಿಸಿಕೊಂಡು ವಾಗ್ದಾಳಿ ನಡೆಸಿದ್ದರು.

ಪೋರ್‌ಬಂದರ್‌ನಲ್ಲಿ ಇಂದು ಚುನಾವಣೆ ಪ್ರಚಾರ ಆರಂಭಿಸಲಿರುವ ರಾಹುಲ್ ಗಾಂಧಿ ಸಂಜೆ ಅಹ್ಮದಾಬಾದ್‌ನಲ್ಲಿ ರ್ಯಾಲಿ ನಡೆಸಲಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನ.27 ಹಾಗೂ 29 ರಂದು ಸೌರಾಷ್ಟ್ರ ಹಾಗೂ ದಕ್ಷಿಣ ಗುಜರಾತ್‌ನ ವಿವಿಧ ಭಾಗಗಳಲ್ಲಿ 8 ರ್ಯಾಲಿಗಳನ್ನು ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News