ದಕ್ಷಿಣ ಭಾರತದ ನಟಿ ನಮಿತಾ ವಿವಾಹ

Update: 2017-11-24 07:11 GMT

ಚೆನ್ನೈ, ನ.24: ದಕ್ಷಿಣ ಭಾರತದ ಗ್ಲಾಮರಸ್ ನಟಿ ನಮಿತಾ ತನ್ನ ದೀರ್ಘಕಾಲದ ಗೆಳಯ ವೀರೇಂದ್ರ ಚೌಧರಿ ಅವರನ್ನು ಶುಕ್ರವಾರ ತಿರುಪತಿಯಲ್ಲಿ ವಿವಾಹವಾದರು.
ತಿರುಪತಿಯ ಫೂಟ್‌ಹಿಲ್‌ನಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ವಿವಾಹ ಸಮಾರಂಭ ನೆರವೇರಿತು. 36 ವರ್ಷದ ನಮಿತಾ ಕಳೆದ ಕೆಲವು ಸಮಯದಿಂದ ವೀರೇಂದ್ರರನ್ನು ಪ್ರೀತಿಸುತ್ತಿದ್ದು, ಈ ತಿಂಗಳಾರಂಭದಲ್ಲಿ ವಿಡಿಯೋ ಸಂದೇಶದಲ್ಲಿ ಮದುವೆಯ ಸುಳಿವು ನೀಡಿದ್ದರು. ತಮಿಳು ರಿಯಾಲಿಟಿ ಶೋ ಬಿಗ್‌ಬಾಸ್‌ನಲ್ಲಿ ನಮಿತಾರ ಸ್ನೇಹಿತರಾಗಿದ್ದ ರೈಝಾ ವಿಲ್ಸನ್ ಈ ವಿಡಿಯೋವನ್ನು ಶೇರ್ ಮಾಡಿದ್ದರು.

2002ರಲ್ಲಿ ತೆಲುಗಿನ ಸಂತಮ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ನಮಿತಾ, 2004ರಲ್ಲಿ ವಿಜಯಕಾಂತ್ ನಟನೆಯ ಏಂಗಲ್ ಅಣ್ಣಾ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪ್ರವೇಶಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News