ಎರಡನೇ ಟೆಸ್ಟ್: ಶ್ರೀಲಂಕಾ 205 ರನ್‌ಗೆ ಆಲೌಟ್

Update: 2017-11-24 11:22 GMT

ನಾಗ್ಪುರ, ನ.24: ಭಾರತದ ಅವಳಿ ಸ್ಪಿನ್ನರ್‌ಗಳಾದ ಆರ್.ಅಶ್ವಿನ್(4-67) ಹಾಗೂ ರವೀಂದ್ರ ಜಡೇಜ(3-56), ವೇಗದ ಬೌಲರ್ ಇಶಾಂತ್ ಶರ್ಮ(3-37)ದಾಳಿಗೆ ಸಿಲುಕಿದ ಶ್ರೀಲಂಕಾ ತಂಡ ಇಲ್ಲಿ ಶುಕ್ರವಾರ ಆರಂಭವಾದ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮೊತ್ತಕ್ಕೆ ಆಲೌಟಾಗಿದೆ.

ಇಲ್ಲಿನ ವಿದರ್ಭ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಮೊದಲ ಇನಿಂಗ್ಸ್‌ನಲ್ಲಿ 79.1 ಓವರ್‌ಗಳಲ್ಲಿ 205 ರನ್‌ಗಳಿಗೆ ಆಲೌಟಾಯಿತು.

ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾದ ಶ್ರೀಲಂಕಾದ ಪರ ಆರಂಭಿಕ ಆಟಗಾರ ಡಿ.ಕರುಣರತ್ನೆ(51) ಹಾಗೂ ನಾಯಕ ದಿನೇಶ್ ಚಾಂಡಿಮಾಲ್(57) ಅರ್ಧಶತಕ ಸಿಡಿಸಿದರೆ, ಉಳಿದವರು ದೊಡ್ಡ ಮೊತ್ತ ಗಳಿಸಲು ವಿಫಲರಾದರು.

 ಶ್ರೀಲಂಕಾ 4.5ನೇ ಓವರ್‌ನಲ್ಲಿ ಆರಂಭಿಕ ಆಟಗಾರ ಸಮರವಿಕ್ರಮ ವಿಕೆಟ್ ಕಳೆದುಕೊಂಡಿತು. ತಂಡಕ್ಕೆ ದೀರ್ಘ ಸಮಯದ ಬಳಿಕ ವಾಪಸಾದ ಇಶಾಂತ್‌ಶರ್ಮ ಭಾರತದ ವಿಕೆಟ್ ಬೇಟೆಗೆ ಚಾಲನೆ ನೀಡಿದರು. ಆ ನಂತರ ಸ್ಪಿನ್‌ದ್ವಯರಾದ ಆರ್.ಅಶ್ವಿನ್ ಹಾಗೂ ಜಡೇಜ ಶ್ರೀಲಂಕಾದ ಬ್ಯಾಟ್ಸ್‌ಮನ್‌ಗಳನ್ನು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಬಿಡಲಿಲ್ಲ.

ಮೊದಲ ಇನಿಂಗ್ಸ್ ಆರಂಭಿಸಿರುವ ಭಾರತ ತಂಡ 8 ಓವರ್‌ಗಳಲ್ಲಿ 11 ರನ್ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರ ಕೆಎಲ್ ರಾಹುಲ್(7) ವಿಕೆಟ್ ಕಳೆದುಕೊಂಡಿದೆ. ಮುರಳಿ ವಿಜಯ್(2) ಹಾಗೂ ಚೇತೇಶ್ವರ ಪೂಜಾರ(2) ಕ್ರೀಸ್ ಕಾಯ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News