ಕುವೈತ್: ವಿದೇಶಿಗರು ಸಾರಿಗೆ ನಿಯಮ ಪದೇ ಪದೇ ಉಲ್ಲಂಘಿಸಿದರೆ ಊರಿಗೆ ಗಡಿಪಾರು

Update: 2017-11-24 11:27 GMT

ಕುವೈತ್, ನ. 24: ಟ್ರಾಫಿಕ್ ನಿಯಮಗಳನ್ನು ಪದೇ ಪದೆ ಉಲ್ಲಂಘಿಸುವ ವಿದೇಶಿಯರನ್ನು ಅವರ ಊರಿಗೆ ಕಳುಹಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಚಾಲನೆಯ ವೇಳೆ ಸೀಟು ಬೆಲ್ಟ್ ಹಾಕದಿರುವುದು, ಮೊಬೈಲ್ ಫೋನ್ ಉಪಯೋಗ ಮೊದಲಾದ ನಿಯಮಗಳನ್ನು ಎರಡು ಬಾರಿಗಿಂತ ಹೆಚ್ಚು ಸಲ ಉಲ್ಲಂಘಿಸಿದರೆ ಅಂತಹವರನ್ನು ಊರಿಗೆ ಕಳುಹಿಸಲಾಗುವುದು ಎಂದು  ಕುವೈತ್ ಗೃಹ ಸಚಿವಾಲಯದ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ಕರ್ನಲ್ ಆದಿಲ್ ಅಲ್ ಹಶ್ಶಾಶ್ ಹೇಳಿದ್ದಾರೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ಇನ್ನೊಂದು ವಾಹನಕ್ಕೆ ಅಡ್ಡಿಯಾಗುವಂತೆ ವಾಹನ ಚಲಾಯಿಸುವುದು, ರಸ್ತೆ ಸಿಗ್ನಲ್‍ಗಳನ್ನು ಉಲ್ಲಂಘಿಸುವುದು, ನಿಗದಿತ ಮಿತಿಗಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸುವುದು,ವಾಹನವನ್ನು ತಿರುಗಿಸಿ ಆತಂಕ ಸೃಷ್ಟಿಸುವುದು  ಮುಂತಾದ ಉಲ್ಲಂಘನೆಗಳು ಎರಡಕ್ಕಿಂತ  ಹೆಚ್ಚು ಬಾರಿ ಕಂಡು ಬಂದರೆ ವಿದೇಶಿಯರನ್ನು ಅವರ ಊರಿಗೆ ಮರಳಿ ಕಳುಹಿಸಲಾಗುವುದು.

ಗಂಭೀರ ಸಾರಿಗೆ ನಿಯಮ ಉಲ್ಲಂಘನೆಯ ಪಟ್ಟಿಗೆ ಇವುಗಳನ್ನು ಸೇರಿಸಿ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಹಶ್ಶಾಶ್  ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News