ಸೌದಿ: 5,000 ಮಹಿಳೆಯರು ಮೊಬೈಲ್ ದುರಸ್ತಿ ಕ್ಷೇತ್ರಕ್ಕೆ

Update: 2017-11-24 16:40 GMT

ಮಕ್ಕಾ (ಸೌದಿ ಅರೇಬಿಯ), ನ. 24: ಸೌದಿ ಅರೇಬಿಯದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ 5000ಕ್ಕೂ ಅಧಿಕ ಮಹಿಳೆಯರು ಮೊಬೈಲ್ ದುರಸ್ತಿ ತರಬೇತಿ ಪಡೆದು ಉದ್ಯೋಗ ಮಾರುಕಟ್ಟೆ ಪ್ರವೇಶಿಸಿದ್ದಾರೆ ಎಂದು ತರಬೇತಿದಾರೆ ಫದ್ವಾ ಅಲ್-ಅಟ್ವಿ ಹೇಳಿದ್ದಾರೆ.

ತರಬೇತಿಯಲ್ಲಿ ಏಕರೂಪತೆ ತರುವುದಕ್ಕಾಗಿ ಸೌದಿ ಅರೇಬಿಯದ ಎಲ್ಲ ವಲಯಗಳಲ್ಲಿ ತರಬೇತಿದಾರರ ತಂಡವೊಂದನ್ನು ಸೃಷ್ಟಿಸಿರುವುದಾಗಿಯೂ ಅವರು ಹೇಳಿದರು.

ಸೌದಿ ತರಬೇತಿದಾರೆ ಫದ್ವಾ ಅಮೆರಿಕ, ಜೋರ್ಡಾನ್ ಮತ್ತು ಈಜಿಪ್ಟ್‌ಗಳಲ್ಲೂ ಹಲವಾರು ಕೋರ್ಸ್‌ಗಳನ್ನು ನಡೆಸುತ್ತಿದ್ದಾರೆ.

ಮೊಬೈಲ್ ನಿರ್ವಹಣೆ ಮತ್ತು ದುರಸ್ತಿ ಹಾಗೂ ಇತರ ತಾಂತ್ರಿಕ ವಿಷಯಗಳಲ್ಲಿ ಐದು ವರ್ಷಗಳಿಂದ ತರಬೇತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಸೌದಿ ಅರೇಬಿಯದ ಉದ್ಯೋಗ ಮಾರುಕಟ್ಟೆಯಲ್ಲಿ ಮಹಿಳಾ ಮೊಬೈಲ್ ದುರಸ್ತಿದಾರರಿಗೆ ಅಗಾಧ ಬೇಡಿಕೆಯಿದೆ ಎಂದು ಅವರು ಅಭಿಪ್ರಾಯಪಟ್ಟರು.

‘‘5,000ಕ್ಕೂ ಅಧಿಕ ಮಹಿಳೆಯರು ತರಬೇತಿ ಪಡೆದಿದ್ದಾರೆ ಹಾಗೂ ಸಣ್ಣ ಉದ್ಯಮಗಳ ಮೂಲಕ ಅಥವಾ ಮನೆಗಳಿಂದಲೇ ಕೆಲಸ ಮಾಡುವ ಮೂಲಕ ಉದ್ಯೋಗ ಮಾರುಕಟ್ಟೆ ಪ್ರವೇಶಿಸಿದ್ದಾರೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News