ಯುವ ಸಮೂಹಕ್ಕೆ ಅವಕಾಶ ಸಿಗಲಿ

Update: 2017-11-24 18:42 GMT

ಮಾನ್ಯರೆ,

ಭಾರತ ಅತೀ ಹೆಚ್ಚು ಯುವ ಸಮುದಾಯವನ್ನು ಹೊಂದಿರುವ ಜಗತ್ತಿನ ಏಕೈಕ ರಾಷ್ಟ್ರ.
ನಮ್ಮ ದೇಶ ಬಲಿಷ್ಠ, ಸಶಕ್ತ, ಪ್ರಗತಿಶೀಲ, ಭವ್ಯ ಭಾರತವಾಗಿ ಹೊರಹೊಮ್ಮಬೇಕಾದರೆ ಅದು ಪ್ರಜ್ಞಾವಂತ ಯುವ ಸಮೂಹದಿಂದ ಮಾತ್ರ ಸಾಧ್ಯ ಎಂದು ಸ್ವಾಮಿ ವಿವೇಕಾನಂದರು, ಡಾ. ಅಬ್ದುಲ್ ಕಲಾಂ ಸೇರಿದಂತೆ ಹಲವು ಮಹನೀಯರು ಕನಸು ಕಂಡಿದ್ದಾರೆ. ನಮ್ಮ ದೇಶ ಅಭಿವೃದ್ಧಿ ಹೊಂದಬೇಕಾದರೆ ಅದು ರಾಜಕೀಯದಿಂದ ಮಾತ್ರ ಸಾಧ್ಯ. ಆದ್ದರಿಂದ ಯುವ ಜನಾಂಗ ರಾಜಕೀಯವಾಗಿ ಪ್ರಬಲವಾಗಬೇಕಾಗಿದೆ.
ಜಗತ್ತಿನ ಕೆಲವು ರಾಷ್ಟ್ರಗಳಲ್ಲಿ ಆಡಳಿತ ಅತಿ ಕಿರಿಯರ ಕೈಯಲ್ಲಿದೆ. ಆ ರಾಷ್ಟ್ರಗಳು ಸಾಕಷ್ಟು ಪ್ರಗತಿ ಸಾಧಿಸಿವೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಗತಿಸಿದರೂ ಬೇರೆ ದೇಶಗಳಿಗೆ ಹೋಲಿಸಿದರೆ ಅಭಿವೃದ್ಧಿ ಕಿಂಚಿತ್ ಮಾತ್ರ. ಇದಕ್ಕೆ ಪ್ರಮುಖ ಕಾರಣ ರಾಜಕೀಯ ಪಕ್ಷಗಳಲ್ಲಿ ಅತೀ ಹೆಚ್ಚು ವಯೋವೃದ್ಧರಿಂದ ಕೂಡಿದ ಪ್ರಭಾವಿ ವ್ಯಕ್ತಿಗಳಿರುವುದು. ಇದರಿಂದಾಗಿ ಭಾರತ ಬಲವರ್ಧಿಸಿಕೊಳ್ಳಲಾಗದೆ ಜಡ್ಡುಗಟ್ಟಿದ ಸ್ಥಿತಿಯಲ್ಲಿಯೇ ಇದೆ.
ಆದ್ದರಿಂದ ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ ಉತ್ಸಾಹಿ, ಸಾಮಾಜಿಕ ಚಿಂತನೆಯುಳ್ಳ ದಕ್ಷ ಯುವ ಸಮುದಾಯಕ್ಕೆ ಹೆಚ್ಚಿನ ಉತ್ತೇಜನ ನೀಡಲು ರಾಜಕೀಯ ಕ್ಷೇತ್ರದಲ್ಲಿ ಯುವ ಸಮೂಹಕ್ಕೆ ಮೀಸಲಾತಿ ನೀಡಬೇಕು. ಈ ಮೂಲಕ ದೇಶದ ಹೊಸ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮರು ನಿರ್ಮಾಣ ಮಾಡಬೇಕಿದೆ. ರಾಜಕೀಯದಲ್ಲಿ ಯುವ ಸಮೂಹದ ಕೈ ಸೇರಿದರೆ ಮಾತ್ರ ನವ ಭಾರತ ಸ್ಥಾಪಿಸಲು ಸಾಧ್ಯವಾಗಬಹುದು.

Writer - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Editor - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Similar News