ಎಸ್ಕೆಎಸ್ಸೆಸ್ಸೆಫ್ ದುಬೈ ವತಿಯಿಂದ 'ಕ್ಲೀನ್ ಅಪ್ ದಿ ವಲ್ಡ್' ಕಾರ್ಯಕ್ರಮ

Update: 2017-11-25 06:47 GMT

ದುಬೈ, ನ. 25: 46ನೆ ಯುಎಇ ರಾಷ್ಟ್ರೀಯ ದಿನಾಚರಣೆ ಅಂಗವಾಗಿ ದುಬೈ ಮುನ್ಸಿಪಾಲಿಟಿ ಅದೀನದಲ್ಲಿ ಎಸ್ಕೆಎಸ್ಸೆಸ್ಸೆಫ್ ದುಬೈ ಸಮಿತಿ 'ಕ್ಲೀನ್ ಅಪ್ ದಿ ವಲ್ಡ್'  ಎಂಬ ಜಾಗತಿಕ ಶುಚಿತ್ವ ಧ್ಯೇಯದಲ್ಲಿ ದುಬೈ ನಗರದ ಪಾಲ್ಮ್ ದೇರಾ ಮೆಟ್ರೊ ಸ್ಟೇಷನ್ ನಿಂದ ಫ್ರಿಜ್ ಮುರಾರ್ ವರೆಗೆ ಶುಚಿತ್ವ ಕಾರ್ಯಕ್ರಮವನ್ನು  ಶುಕ್ರವಾರ ಬೆಳಗ್ಗೆ ಹಮ್ಮಿಕೊಂಡಿತ್ತು.

ಕಾರ್ಯಕ್ರಮದಲ್ಲಿ ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿ ಮಾಡನ್ನೂರು ಇದರ ಪ್ರಾಂಶುಪಾಲರಾದ ಅಡ್ವೊಕೇಟ್ ಹನೀಫ್ ಹುದವಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಭೂಮಿ ತಾಯಿ ಮತ್ತು ಶುಚಿತ್ವ ವಿಶ್ವಾಸದ ಭಾಗ ಎಂಬ ವಿಷಯದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ದುಬೈ ಮುನ್ಸಿಪಾಲಿಟಿ ಅಧಿಕಾರಿ ಆದಿಲ್ ಗೊಲಂ ರಂಝಾನಿ, ಎಸ್ಕೆಎಸ್ಸೆಸ್ಸೆಫ್ ದುಬೈ ಅಧ್ಯಕ್ಷ ಅಬ್ದುಲ್ ಖಾದರ್ ಫೈಝಿ, ಎಸ್ಕೆಎಸ್ಸೆಸ್ಸೆಫ್ ದುಬೈ ಕರ್ನಾಟಕ ಅಧ್ಯಕ್ಷ ಅಸ್ಗರ್ ಅಲೀ ತಂಙಲ್,  ದುಬೈ ಸುನ್ನಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಶೌಕತ್ ಅಲಿ ಹುದವಿ ಹಾಗೂ ಸಾಮಾಜಿಕ ಮತ್ತು ಧಾರ್ಮಿಕ ವಲಯದ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News