×
Ad

ಎಟಿಎಂನಿಂದ ಹಣ ಕಳವು ಪ್ರಕರಣ: ನಾಲ್ವರ ಬಂಧನ

Update: 2017-11-27 18:49 IST

ಬೆಂಗಳೂರು, ನ.27: ಎಟಿಎಂನಿಂದ ಹಣ ಕಳವು ಮಾಡಿದ್ದ ಆರೋಪದ ಮೇಲೆ ನಾಲ್ವರನ್ನು ನಗರದ ಕೋಣನಕುಂಟೆ ಪೊಲೀಸರು ಬಂಧಿಸಿ 6.25ಲಕ್ಷ ರೂ.ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಮಂಡ್ಯ ತಾಲೂಕಿನ ಶಿವಕುಮಾರ್(23), ಕೀರ್ತಿ ಕುಮಾರ್(20), ರಾಕೇಶ್(22) ಮತ್ತು ಶ್ರೀಧರ (21) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ನ.1ರಂದು ಮಧ್ಯರಾತ್ರಿ 12:30ರಲ್ಲಿ ಜೆ.ಪಿ.ನಗರ 8ನೆ ಹಂತದ ಗೊಟ್ಟಿಗೆರೆ ಬಳಿ ಎಚ್‌ಎಂ ವರ್ಲ್ಡ್ ಸಿಟಿ ಅಪಾರ್ಟ್‌ಮೆಂಟ್ ಸಮೀಪದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಎಟಿಎಂ ಮಿಷನ್‌ಗೆ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾವನ್ನು ಧ್ವಂಸಗೊಳಿಸಿ ಎಟಿಎಂ ಸಮೇತ 7.85 ಲಕ್ಷ ರೂ. ಹಣವನ್ನು ಕಳ್ಳತನ ಮಾಡಿದ್ದ ಬಗ್ಗೆ ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣ ಸಂಬಂಧ ವಿವಿಧ ಮಾಹಿತಿ ಕಲೆ ಹಾಕಿದ ತಂಡ ನಾಲ್ವರು ಎಟಿಎಂ ದರೋಡೆಕೋರರನ್ನು ಬಂಧಿಸಿ 6.25 ಲಕ್ಷ ರೂ. ನಗದು, ಎಟಿಎಂ ಮಿಷನ್, ಗ್ಯಾಸ್‌ಕಟರ್, ಕಾರು ಮತ್ತು ಬೈಕನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ ಬಂಧನದಿಂದ ಬನಶಂಕರಿ ಠಾಣೆಯಲ್ಲಿ ದಾಖಲಾದ ಒಂದು ಎಟಿಎಂ ದರೋಡೆಯತ್ನ ಪ್ರಕರಣ, ಕೋಣನಕುಂಟೆ ಠಾಣೆಯಲ್ಲಿ ದಾಖಲಾದ ಒಂದು ಎಟಿಎಂ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ತನಿಖೆ ಕೈಗೊಂಡ ತಂಡವನ್ನು ನಗರ ಪೊಲೀಸ್ ಆಯುಕ್ತ ಸುನೀಲ್‌ಕುಮಾರ್, ಅಪರ ಪೊಲೀಸ್ ಆಯುಕ್ತರಾದ ಮಾಲಿನಿ ಕೃಷ್ಣಮೂರ್ತಿ ಪ್ರಶಂಸಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News