×
Ad

ಬೂತ್‌ಮಟ್ಟದ ಸಮಿತಿಗಳ ಕ್ರೀಯಾಶೀಲತೆಗೆ ಶಾಸಕರ ಸಹಕಾರ ಅಗತ್ಯ: ಮುದಬ್ಬಿರ್‌ ಅಹ್ಮದ್‌ ಖಾನ್

Update: 2017-11-27 19:00 IST

ಬೆಂಗಳೂರು, ನ.27: ಬೂತ್ ಹಾಗೂ ವಾರ್ಡ್‌ಮಟ್ಟದ ಸಮಿತಿಗಳನ್ನು ಕ್ರೀಯಾಶೀಲರನ್ನಾಗಿಸಲು ಸ್ಥಳೀಯ ಶಾಸಕರು ಹಾಗೂ ಬಿಬಿಎಂಪಿ ಸದಸ್ಯರ ಸಹಕಾರ ಅತ್ಯಗತ್ಯ ಎಂದು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕ ಬೆಂಗಳೂರು ವಿಭಾಗದ ಅಧ್ಯಕ್ಷ ಮುದಬ್ಬಿರ್‌ ಅಹ್ಮದ್‌ ಖಾನ್ ಪ್ರತಿಪಾದಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಹೊಸ್ತಿನಲ್ಲಿ ಪ್ರಮುಖವಾಗಿ ಬೂತ್‌ಮಟ್ಟದ ಸಮಿತಿಗಳು ಹೆಚ್ಚು ಕ್ರೀಯಾಶೀಲವಾಗಿರಬೇಕು. ಯಾವ ಕ್ಷೇತ್ರಗಳಲ್ಲಿ ಬೂತ್ ಸಮಿತಿಗಳು ರಚನೆಯಾಗಿಲ್ಲವೋ ಆಯಾ ಕ್ಷೇತ್ರಗಳ ಶಾಸಕರಿಗೆ ಶೀಘ್ರವೆ ಬೂತ್ ಸಮಿತಿಗಳ ರಚನೆಗೆ ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ ಎಂದರು.

ಸಮಯ ಕಡಿಮೆ ಇದೆ, ಕೆಲಸ ಹೆಚ್ಚಿದೆ. ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಯಶಸ್ವಿಯಾಗಿದ್ದು, ಜನವರಿಯಲ್ಲಿ ಕೆಪಿಸಿಸಿ ವತಿಯಿಂದ ಮತ್ತೊಂದು ಮಹತ್ವದ ಕಾರ್ಯಕ್ರಮ ಘೋಷಣೆಯಾಗುವ ಸಾಧ್ಯತೆಯಿದ್ದು, ಅದಕ್ಕಾಗಿ, ಬೂತ್ ಸಮಿತಿಗಳು ಎಲ್ಲ ಕ್ಷೇತ್ರಗಳಲ್ಲಿ ಸಕ್ರಿಯವಾಗಿರಬೇಕು ಎಂದು ಹೇಳಿದರು.

ರಾಜ್ಯ ಸರಕಾರದ ಕಾರ್ಯಕ್ರಮಗಳು, ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿದೆಯೋ ಇಲ್ಲವೋ ಎಂಬುದು ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ವೇಳೆ ನಮ್ಮ ಗಮನಕ್ಕೆ ಬಂದಿದೆ. ಸ್ಥಳೀಯವಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡಲಾಗುತ್ತಿದೆ ಎಂದರು.

ಬೆಂಗಳೂರು ಉತ್ತರ ವಿಭಾಗದ ನೂತನ ಅಧ್ಯಕ್ಷ ಫಾರೂಕ್ ಪಾಷ ಮಾತನಾಡಿ, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಲೋಕಸಭಾ ಕ್ಷೇತ್ರವಾರು ಬೆಂಗಳೂರಿನಲ್ಲಿ ಉತ್ತರ, ದಕ್ಷಿಣ ಹಾಗೂ ಕೇಂದ್ರ ಎಂಬ ಮೂರು ಸಮಿತಿಗಳನ್ನು ರಚಿಸಲಾಗಿದೆ ಎಂದರು.

ನನಗೆ ಜವಾಬ್ದಾರಿ ವಹಿಸಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆ.ಆರ್.ಪುರ, ಪುಲಿಕೇಶಿನಗರ, ಹೆಬ್ಬಾಳ, ಬ್ಯಾಟರಾಯನಪುರ, ಯಲಹಂಕ, ಯಶವಂತಪುರ, ಮಲ್ಲೇಶ್ವರಂ, ಮಹಾಲಕ್ಷ್ಮಿಲೇಔಟ್, ರಾಜರಾಜೇಶ್ವರಿ ನಗರ ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News