ಪೇಜಾವರ ಶ್ರೀ ಹೇಳಿಕೆಗೆ ದಲಿತ ಸಂಘಟನೆಗಳ ಒಕ್ಕೂಟ ಖಂಡನೆ
Update: 2017-11-27 20:34 IST
ಬೆಂಗಳೂರು, ನ. 27: ಉಡುಪಿಯ ಕೃಷ್ಣ ಮಠದಲ್ಲಿ ನಡೆದ ಧರ್ಮ ಸಂಸತ್‌ನಲ್ಲಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಸಂವಿಧಾನ ಬದಲಿಸಬೇಕೆಂದು ಆಗ್ರಹಿಸಿರುವುದನ್ನು ದಲಿತ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
ಪೇಜಾವರ ಸ್ವಾಮೀಜಿ ಕೋಮುವಾದಿಗಳನ್ನು ಪ್ರಚೋದಿಸಿ ದೇಶದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ. ಸಂವಿಧಾನದತ್ತವಾದ ಜಾತ್ಯತೀತ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿರುವ ಸ್ವಾಮೀಜಿ, ಏಕರೂಪ ನಾಗರಿಕ ಸಂಹಿತೆ ಜಾರಿಗೆ ಆಗ್ರಹಿಸಿದ್ದಾರೆ ಎಂದು ಒಕ್ಕೂಟ ಟೀಕಿಸಿದೆ.
ಭಾರತದ ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆಗೆ ಭಂಗ ಉಂಟು ಮಾಡುವಂತಹ ಮಾತುಗಳನ್ನಾಡಿದ ಪೇಜಾವರ ಸ್ವಾಮಿಗೆ ದೇಶದ ಬಹುಸಂಸ್ಕೃತಿ, ವೈವಿಧ್ಯಮಯ ಮತ್ತು ಜಾತಿಗಳನ್ನು ವಿಭಜಿಸುವ ಹಿಂದುತ್ವವನ್ನು ಪ್ರತಿಪಾದಿಸುವ ದೇಶದ್ರೋಹಿ, ಸಂವಿಧಾನ ವಿರೋಧಿತನವನ್ನು ನ.29ರಂದು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಒಕ್ಕೂಟ ಪ್ರಕಟನೆಯಲ್ಲಿ ತಿಳಿಸಿದೆ.