×
Ad

ಫ್ಲಿಪ್ ಕಾರ್ಟ್ ಸ್ಥಾಪಕರ ವಿರುದ್ಧ ಪ್ರಕರಣ ದಾಖಲು

Update: 2017-11-27 20:49 IST

ಬೆಂಗಳೂರು, ನ.27: ಉದ್ಯಮಿಯೋರ್ವರಿಗೆ ವಂಚಿಸಿದ ಆರೋಪದಲ್ಲಿ ಫ್ಲಿಪ್ ಕಾರ್ಟ್ ಸ್ಥಾಪಕರಾದ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಹಾಗು ಇತರ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

12,500 ಲ್ಯಾಪ್ ಟಾಪ್ ಗಳನ್ನು ಪಡೆದುಕೊಂಡು 9.96 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇಂದಿರಾನಗರ ಮೂಲದ ಸಿ ಸ್ಟೋರ್ ಕಂಪೆನಿಯ ಮಾಲಕ ನವೀನ್ ಕುಮಾರ್ ಎಂಬವರು ದಾಖಲಿಸಿರುವ ಎಫ್ ಐಆರ್ ನಲ್ಲಿ ಸಚಿನ್ ಬನ್ಸಾಲ್, ಬಿನ್ನಿ ಬನ್ಸಾಲ್, ಸೇಲ್ಸ್ ನಿರ್ದೇಶಕ ಹರಿ, ಸುಮಿತ್ ಆನಂದ್ ಹಾಗು ಇತರರ ಹೆಸರಿದೆ.

“ಲ್ಯಾಪ್ ಟಾಪ್ ಹಾಗು ಇತರ ಇಲೆಕ್ಟ್ರಾನಿಕ್ ವಸ್ತುಗಳನ್ನು ಸಪ್ಲೈ ಮಾಡುವುದಾಗಿ ನಮ್ಮ ನಡುವೆ ಒಪ್ಪಂದವಾಗಿತ್ತು. 2015ರ ಜೂನ್ ನಿಂದ 2016ರ ಜೂನ್ ನಡುವೆ 14,000 ಲ್ಯಾಪ್ ಟಾಪ್ ಗಳನ್ನು ವಿತರಿಸಲಾಗಿತ್ತು. 1,482 ಲ್ಯಾಪ್ ಟಾಪ್ ಗಳನ್ನು ಫ್ಲಿಪ್ ಕಾರ್ಟ್ ವಾಪಸ್ ನೀಡಿದೆ. ಆದರೆ ಬಾಕಿ ಮೊತ್ತವನ್ನು ಪಾವತಿಸಿಲ್ಲ. ಆದರೆ ಈ ಬಗ್ಗೆ ಪ್ರಶ್ನಿಸಿದಾಗ 3,901 ಲ್ಯಾಪ್ ಟಾಪ್ ಗಳನ್ನು ಹಿಂದಿರುಗಿಸಿರುವುದಾಗಿ ಹೇಳಲಾಗಿದೆ. ಬಾಕಿ ಪಾವತಿಸದೆ ಅವರು ನನಗೆ 9,96,21,419 ರೂ.ಗಳನ್ನು ವಂಚಿಸಿದ್ದಾರೆ” ಎಂದು  ನವೀನ್ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಐಪಿಸಿ ಸೆಕ್ಷನ್ 34, 406 ಹಾಗು 420ರ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News