ಸೌದಿ: ಹಜ್, ಉಮ್ರಾ ಸುಲಲಿತಗೊಳಿಸಲು ಇ-ಸಿಸ್ಟಮ್

Update: 2017-11-28 14:16 GMT

ಜಿದ್ದಾ (ಸೌದಿ ಅರೇಬಿಯ), ನ. 28: ಇನ್ನು ಮುಂದೆ ಹಜ್ ಯಾತ್ರಿಗಳು ತಮ್ಮ ದೇಶಗಳ ಅಂಗೀಕೃತ ಹಜ್ ಕಚೇರಿಗಳ ಮೂಲಕವೇ ಹಜ್ ಇಲೆಕ್ಟ್ರಾನಿಕ್ ಸಿಸ್ಟಮ್ ನೋಂದಣಿ ಪ್ರಕ್ರಿಯೆಗಳನ್ನು ಅಂತಿಮಗೊಳಿಸಬಹುದಾಗಿದೆ ಎಂದು ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯದಲ್ಲಿರುವ ಅಧಿಕೃತ ಮೂಲವೊಂದು ತಿಳಿಸಿದೆ.

ಹಜ್ ಯಾತ್ರೆಯ ಎಲ್ಲ ಮಟ್ಟಗಳಲ್ಲಿ ಹಾಗೂ ವಿಧಾನಗಳಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಸಚಿವಾಲಯವು ಶ್ರಮಿಸುತ್ತಿದೆ ಎಂದು ಮೂಲ ಹೇಳಿದೆ. ಹಜ್ ಸೇವೆಗಳ ವೆಚ್ಚಗಳನ್ನು ಇಲೆಕ್ಟ್ರಾನಿಕ್ ಸಿಸ್ಟಮ್ ತೋರಿಸುತ್ತದೆ.

ಸಚಿವಾಲಯವು ತನ್ನ ಕೆಲಸಗಳನ್ನು ‘ಯೂನಿಫೈಡ್ ಇಲೆಕ್ಟ್ರಾನಿಕ್ ಪಾತ್’ಗೆ ವರ್ಗಾಯಿಸಿದೆ ಹಾಗೂ ಸೇವಾ ಪೂರೈಕೆದಾರರು ಮತ್ತು ಸೇವೆ ಸ್ವೀಕರಿಸಿದವರ ಪ್ರತಿಕ್ರಿಯೆಗಳ ಆಧಾರದಲ್ಲಿ ಕೆಲಸ ಮಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News