ಅಫ್ಘಾನ್: ತಾಲಿಬಾನ್, ಐಸಿಸ್ ಉಗ್ರರ ನಡುವೆ ಭೀಕರ ಕಾಳಗ

Update: 2017-11-28 14:41 GMT

ತಾಲಿಬಾನ್, ಕಾಬೂಲ್, ನ. 28: ಪೂರ್ವ ಅಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತದಲ್ಲಿ ತಾಲಿಬಾನ್ ಮತ್ತು ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರರ ನಡುವೆ ಕಳೆದ ಎರಡು ದಿನಗಳಿಂದ ಭೀಕರ ಕಾಳಗ ನಡೆಯುತ್ತಿದೆ ಎಂದು ಪ್ರಾಂತೀಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.

ಖೊಗ್ಯಾನಿ ಮತ್ತು ಶೇರ್‌ಝಾದ್ ಜಿಲ್ಲೆಗಳ ಗ್ರಾಮಗಳಲ್ಲಿರುವ ನೂರಾರು ಕುಟುಂಬಗಳು ಸ್ಥಳಾಂತರಗೊಂಡಿವೆ ಎಂದು ಪ್ರಾಂತೀಯ ಗವರ್ನರ್‌ರ ವಕ್ತಾರರೊಬ್ಬರು ಹೇಳಿದರು.

ಈ ಎರಡೂ ಗುಂಪುಗಳ ಉಗ್ರರನ್ನು ನಿರ್ಮೂಲಗೊಳಿಸಲು ವಾಯು ಮತ್ತು ಭೂಸೇನಾ ಪಡೆಗಳು ಕಾರ್ಯಾಚರಣೆ ಆರಂಭಿಸಿವೆ ಎಂದರು.

ಉಗ್ರ ಗುಂಪುಗಳ ನಡುವಿನ ಕಾಳಗದಲ್ಲಿ ಆರು ನಾಗರಿಕರು ಗಾಯಗೊಂಡಿದ್ದಾರೆ. ಅದೇ ವೇಳೆ, ಡಝನ್‌ಗಟ್ಟಳೆ ಉಗ್ರರು ಸತ್ತಿರುವ ಬಗ್ಗೆ ವರದಿಗಳಿವೆ ಎಂದು ವಕ್ತಾರರು ನುಡಿದರು.

ಶೇರ್‌ಝಾದ್, ಖೊಗ್ಯಾನಿ ಮತ್ತು ಹಸಾರಕ್ ಜಿಲ್ಲೆಗಳು ಆಯಕಟ್ಟಿನ ಸ್ಥಳಗಳಲ್ಲಿವೆ. ಯಾಕೆಂದರೆ, ಈ ಜಿಲ್ಲೆಗಳು ನೆರೆಯ ಲೋಗರ್ ಪ್ರಾಂತ ಹಾಗೂ ರಾಜಧಾನಿ ಕಾಬೂಲ್‌ಗೆ ಸಂಪರ್ಕ ಕಲ್ಪಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News