ಎರಡು ಸಮ್ಮೇಳನಗಳು ಪರಸ್ಪರ ಪೂರಕ

Update: 2017-11-29 18:35 GMT

ಮಾನ್ಯರೆ,

ಮೈಸೂರಿನಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಉಡುಪಿಯಲ್ಲಿ ನಡೆದ ವಿಹಿಂಪ ಧರ್ಮ ಸಂಸದ್‌ಗಳನ್ನು ಮುಖಾಮುಖಿಯಾಗಿಸಿ, ಒಂದಕ್ಕೊಂದು ಉತ್ತರವೆಂಬಂತೆ ಬರೆದಿದ್ದೀರಿ. ಹಾಗೆ ಭಾವಿಸಬೇಕಾಗಿಲ್ಲ.
ಬಹುತ್ವ ಪ್ರತಿಪಾದನೆ, ಉದಾರ ಮನೋಧರ್ಮ ‘ಸೆಕ್ಯುಲರಿಸಂ’(?)ಗಳನ್ನು ಸಾಹಿತ್ಯ ಸಮ್ಮೇಳನ ಪ್ರತಿಪಾದಿಸುತ್ತದೆ ಎಂಬಂತೆ ಅಭಿಮತ. ಸರಿ, ಭಾರತದ ಸೆಕ್ಯುಲರ್-ಎಡ-ಲಿಬರಲ್-ಇಸ್ಲಾಮಿಕ್ ರ್ಯಾಡಿಕಲ್. ಚಿಂತಕರು ಪ್ರತಿಪಾದಿಸುವ ‘ಬಹುತ್ವ’ವು ‘‘ತಮ್ಮ ಅಜೆಂಡಾ ನೆರವೇರುವವರೆಗೆ ಮಾತ್ರ ’’ ಎಂಬ ಅನುಕೂಲ ಸಿಂಧು ಔದಾರ್ಯವಾಗಿದೆ. ‘‘ಸಂವಿಧಾನವನ್ನು ಬೆಳೆಸಿಕೊಂಡೇ ಅದನ್ನು ಬುಡಮೇಲು ಮಾಡುವುದು ನಮ್ಮ ಗುರಿ’’ ಎಂದು ದಶಕಗಳ ಹಿಂದೆ ಕಾ॥ ವಿಹಿಂಪ ಧರ್ಮಸಂಸದ್ ಮತ್ತು ಸಾಹಿತ್ಯ ಸಮ್ಮೇಳನ ಪೂರಕಗಳು.

ಏಕೆಂದರೆ: ಭಾರತದ ಬಹುತ್ವ, ಬಹುವರ್ಣ ರಂಜಿತ ಸಂಸ್ಕೃತಿ, ಆರಾಧನಾ ವೈವಿಧ್ಯ, ಅಕ್ಷರಶ ಸಹಸ್ರ ಸಂಖ್ಯೆಯ ಪಂಥ ವಿಧಾನ ಟ್ರೆಡಿಶನ್. ಅದು ಹಿಂದೂ, ಹಿಂದುತ್ವ ಲಕ್ಷ, ಲಕ್ಷಣಗಳು. ‘ಬಹುತ್ವ ಉಳಿಸಿ’ ಎಂದು ಕಿರಿಚಾಡುವ ಅನೇಕರದ್ದು ಸ್ವತಃ ಏಕತ್ವವಾದಿ, ಬಹುತ್ವ ವಿರೋಧಿ ನೆಲೆ.ಭಾರತದ ಸೆಕ್ಯೂಲರಿಸಂಗೆ ಹಿಂದುತ್ವವು ಮುಖ್ಯ ಆಧಾರ ಹೊರತು ಪಾಶ್ಚಾತ್ಯ ಮೂಲದ ಎಡಬಿಡಂಗಿ ಸೆಕ್ಯುಲರಿಸಂ ಅಲ್ಲವೇ ಅಲ್ಲ.

 ‘ಸ್ವಭಾಷೆ’ ‘ಪ್ರಾದೇಶಿಕ ಭಾಷೆ’ ಉಳಿವಿನ ಬಗೆಗೆ ಬಹಳಷ್ಟು ಪ್ರತಿಪಾದಿಸುವ, ನ್ಯಾಯವಾದ ವಿಚಾರ ಹೇಳುವ ಎಡ-ಲಿಬರಲ್‌ಗಳು ಸ್ವಧರ್ಮ(ಗಳ) ಬಗ್ಗೆ ಬರುವಾಗ ಮಾತಾಡುವುದಿಲ್ಲ! ಯಾಕೆ ಎಂಬುದಕ್ಕೆ ವಿವರಣೆ ಬೇಡವಷ್ಟೇ?

Similar News