ಸಾವಿನ ವದಂತಿ:ಅಲ್ಲಗೆಳೆದ ಉಮರ್ ಅಕ್ಮಲ್ !

Update: 2017-11-29 18:49 GMT

ಕರಾಚಿ, ನ.29: ಪಾಕಿಸ್ತಾನದ ಫಾರ್ಮ್ ಕಳೆದುಕೊಂಡಿರುವ ದಾಂಡಿಗ ಉಮರ್ ಅಕ್ಮಲ್ ಮೃತಪಟ್ಟಿದ್ದಾರೆ ಎಂಬ ವದಂತಿ ಪಾಕಿಸ್ತಾನದಲ್ಲಿ ಹರಡಿದ್ದು, ಆದರೆ ಬಳಿಕ ಅಕ್ಮಲ್ ತಾನು ಜೀವಂತವಾಗಿರುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊ ಪೋಸ್ಟ್ ಮಾಡಿದ ಘಟನೆ ವರದಿಯಾಗಿದೆ. ಕೋಚ್ ಮಿಕಿ ಅರ್ಥರ್ ಅವರೊಂದಿಗೆ ಸಂಬಂಧ ಹಳಸಿದ ಬಳಿಕ ಅಕ್ಮಲ್ ನಾಪತ್ತೆಯಾಗಿದ್ದರು.

 ಇಸ್ಲಾಮಾಬಾದ್‌ನಲ್ಲಿ ಸಶಸ್ತ್ರ ಪಡೆಗಳು ಧಾರ್ಮಿಕ ಮುಖಂಡರ ವಿರುದ್ಧ ನಡೆಸಿದ್ದ ಕಾರ್ಯಾಚರಣೆಯ ವೇಳೆ 6 ಮಂದಿ ಮೃತಪಟ್ಟಿದ್ದರು. ಮೃತಪಟ್ಟವರಲ್ಲಿ ಉಮರ್ ಅಕ್ಮಲ್ ಸೇರಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ ಹರಡಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಸಾವಿನ ಬಗ್ಗೆ ವರದಿ ಬಂದ ಬೆನ್ನಲ್ಲೇ ಅಕ್ಮಲ್ ಅವರು ಸಾಮಾಜಿಕ ಮಾಧ್ಯಮಗಳಿಗೆ ವೀಡಿಯೊ ಪೋಸ್ಟ್ ಮಾಡಿ ‘‘ ನನ್ನ ಸಾವಿನ ಬಗ್ಗೆ ಸುಳ್ಳು ವದಂತಿ ಹರಡಿದೆ. ಅಲ್ಲಾಹನ ದಯೆಯಿಂದ ನಾನು ಲಾಹೋರ್‌ನಲ್ಲಿ ಸುರಕ್ಷಿತವಾಗಿ ದ್ದೇನೆ. ನಾನು ಲಾಹೋರ್‌ನಲ್ಲಿ ನ್ಯಾಶನಲ್ ಟ್ವೆಂಟಿ 20 ಕಪ್ ಟೂರ್ನಮೆಂಟ್‌ನ ಸೆಮಿಪೈನಲ್‌ನಲ್ಲಿ ಆಡುವುದನ್ನು ನೋಡಬಹುದು. ದಯವಿಟ್ಟು ಇಂತಹ ಸುಳ್ಳು ಸುದ್ದಿಗಳನ್ನು ಹರಡಬೇಡಿ. ಧನ್ಯವಾದಗಳು ’’ ಎಂದು ವೀಡಿಯೊದಲ್ಲಿ ಅಕ್ಮಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News