ಬೆಂಗಳೂರು: ನಾಲ್ಕು ಕಡೆ ಕಳವು
ಬೆಂಗಳೂರು, ಡಿ.1: ನಗರದ ನಾಲ್ಕು ಕಡೆ ಮನೆಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.
ಯಲಹಂಕ: ನ್ಯಾಯಾಂಗ ಬಡಾವಣೆಯ 14ನೆ ಕ್ರಾಸ್, 11ನೆ ಮುಖ್ಯರಸ್ತೆ ನಿವಾಸಿ ಪ್ರೇಮಾ ಎಂಬವರ ಮನೆಯ ಬಾಗಿಲು ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು 60 ಚಿನ್ನಾಭರಣ ಸೇರಿ ದುಬಾರಿ ಬೆಲೆಯ ವಸ್ತುಗಳನ್ನು ಕಳವು ಮಾಡಿದ್ದಾರೆ ಎನ್ನಲಾಗಿದೆ.
ವಿಜಯನಗರ: ಹಂಪಿನಗರದ 9ನೆ ಕ್ರಾಸ್ ನಿವಾಸಿ ಉಮೇಶ್ ಬಾಬು ಎಂಬುವರು ಗುರುವಾರ ಬೆಳಗ್ಗೆ ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಮನೆಯ ಬೀಗ ಮೀಟಿ ಒಳನುಗ್ಗಿರುವ ದುಷ್ಕರ್ಮಿಗಳು ಬೀರುನಲ್ಲಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದಾರೆ. ಉಮೇಶ್ ಸಂಜೆ ಮನೆಗೆ ವಾಪಸ್ಸು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸುಬ್ರಹ್ಮಣ್ಯಪುರ: ಚಿಕ್ಕಕಲ್ಲಸಂದ್ರದ ಸಾರ್ವಭೌಮನಗರ 7ನೆ ಮುಖ್ಯರಸ್ತೆ ನಿವಾಸಿ ಜಯಪ್ರಕಾಶ್ ಎಂಬವರ ಮನೆಯ ಬೀಗ ಒಡೆದು 8 ಗ್ರಾಂ ಚಿನ್ನಾಭರಣ ಕದ್ದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹುಳಿಮಾವು: ಬಸವನಪುರ ಚರ್ಚ್ ಸಮೀಪದ ನಿವಾಸಿ ಶಿವಪ್ಪ ಎಂಬುವರು ಕಾರ್ಯನಿಮಿತ್ತ ಹೊರ ಹೋಗಿದ್ದಾಗ ಇವರ ಮನೆಗೆ ನುಗ್ಗಿ ಚಿನ್ನಾಭರಣ, ದುಬಾರಿ ಬೆಲೆಯ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಎಲ್ಲ ಪ್ರಕರಣಗಳನ್ನು ಆಯಾ ಠಾಣೆಯ ಪೊಲೀಸರು ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಮುಂದಾಗಿದ್ದಾರೆ.